Sunday, July 7, 2024
Homeಟಾಪ್ ನ್ಯೂಸ್VIJAYAPURA: ತೆಪ್ಪ ಮಗುಚಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ

VIJAYAPURA: ತೆಪ್ಪ ಮಗುಚಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಘೋಷಣೆ

ವಿಜಯಪುರ: ತೆಪ್ಪ ಮಗುಚಿ ಮೃತಪಟ್ಟವರ ಕುಟುಂಬಕ್ಕೆ ತಲಾ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸಚಿವ ಶಿವಾನಂದ ಪಾಟೀಲ್ (shivanand patil) ಘೋಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಪ್ಪ ದುರಂತದಲ್ಲಿ ಮೃತಪಟ್ಟ ಪುಂಡಲಿಕ ಯಂಕಂಚಿ ತಯ್ಯಬ್ ಚೌಧರಿ ಹಾಗೂ ದಶರಥ್ ಗೌಡ ಕುಟುಂಬಸ್ಥರಿಗೆ ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಹೇಳಿದ್ದಾರೆ.

ಘಟನೆಯೇನು?:
ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ರೇಡ್ ಮಾಡುತ್ತಿದ್ದಾರೆ ಎಂಬ ಭೀತಿಯಿಂದ ನದಿ ದಾಟಲು ಯತ್ನಿಸಿ ತೆಪ್ಪ ಮುಳುಗಿ ಮೂವರು ಮೃತಪಟ್ಟ ಘಟನೆ ವಿಜಯಪುರ (Vijayapura) ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಬಳಿ ಕೃಷ್ಣಾ ನದಿಯಲ್ಲಿ ಸಂಭವಿಸಿದೆ.

ಕೋಲ್ಹಾರ ಪಟ್ಟಣದ ನಿವಾಸಿ ದಶರಥ ಗೌಡರ್ (54), ತಯಾಬ್  ಎನ್ನುವವರು ಮೃತಪಟ್ಟಿದ್ದಾರೆ. ಸಾಮರ್ಥ್ಯ ಮೀರಿ ಹೆಚ್ಚು ಜನ ತೆಪ್ಪದಲ್ಲಿ ಕುಳಿತು ಎಸ್ಕೇಪ್ ಆಗುವಾಗ, ಬಿರುಗಾಳಿಗೆ ಆಯಾ ತಪ್ಪಿ ತೆಪ್ಪ ನದಿಯಲ್ಲಿ ಮಗುಚಿ ಬಿದ್ದಿದೆ.

ಇತರ ಮೂವರಿಗಾಗಿ ಶೋಧನಾ ಕಾರ್ಯ ಮುಂದುವರಿದಿದೆ. ಕತ್ತಲಾದ ಕಾರಣ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಿರುವ ಸಿಬ್ಬಂದಿ ನಾಳೆ ಕಾರ್ಯಚರಣೆ ಮುಂದುವರಿಸಲಿದ್ದಾರೆ.

ಹೆಚ್ಚಿನ ಸುದ್ದಿ