Sunday, July 7, 2024
Homeಟಾಪ್ ನ್ಯೂಸ್BREAKING : ವೀರಪ್ಪ ಮೊಯ್ಲಿ ಪುತ್ರಿ ಹಂಸಾ ಮೊಯ್ಲಿ ವಿಧಿವಶ

BREAKING : ವೀರಪ್ಪ ಮೊಯ್ಲಿ ಪುತ್ರಿ ಹಂಸಾ ಮೊಯ್ಲಿ ವಿಧಿವಶ

ಬೆಂಗಳೂರು : ಮಾಜಿ ಸಿಎಂ ಎಂ.ವೀರಪ್ಪ ಮೊಯ್ಲಿ ಅವರ ಪುತ್ರಿ ನಟಿ, ಹಂಸ ಮೊಯ್ಲಿ (46) ಇಂದು ವಿಧಿವಶರಾಗಿದ್ದಾರೆ.  ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೃತಪಟ್ಟಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ ಅವರು ತೀವ್ರ ಅಸ್ವಸ್ಥರಾಗಿದ್ದರು. ಆಗ ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾರೆ. ವೀರಪ್ಪಮೊಯ್ಲಿ ಅವರ 3ನೇ ಪುತ್ರಿಯಾಗಿದ್ದ ಹಂಸ ಅವರು ಜನಸಾಮಾನ್ಯರ ಕಷ್ಟಗಳಿಗೂ ಸ್ಪಂದಿಸಿ ಸಹಾಯ ಮಾಡುತ್ತಿದ್ದರು ಎನ್ನಲಾಗಿದೆ.

ಇನ್ನು ಹಂಸ ಮೊಯ್ಲಿ ಅವರು ಭರತನಾಟ್ಯ ನೃತ್ಯಗಾರ್ತಿ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿಯೂ ಖ್ಯಾತಿ ಪಡೆದುಕೊಂಡಿದ್ದರು.  ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳಿನ ಖ್ಯಾತ ಚಲನಚಿತ್ರ ಶೃಂಗಾರಂನಲ್ಲಿ ಅಭಿನಯಿಸಿದ್ದರು.

ಹೆಚ್ಚಿನ ಸುದ್ದಿ