Sunday, July 7, 2024
Homeಕ್ರೀಡೆVIRAL NEWS : ಕೊಹ್ಲಿ, ಧೋನಿಗೆ ವಿಶಿಷ್ಟವಾಗಿ ವಿಷ್‌ ಮಾಡಿದ  ಪುತ್ರಿಯರು! -  VIDEO 

VIRAL NEWS : ಕೊಹ್ಲಿ, ಧೋನಿಗೆ ವಿಶಿಷ್ಟವಾಗಿ ವಿಷ್‌ ಮಾಡಿದ  ಪುತ್ರಿಯರು! –  VIDEO 

ನವದೆಹಲಿ : ಇಂದು ವಿಶ್ವ ಅಪ್ಪಂದಿರ ದಿನ.. ಈ ದಿನ ತನ್ನ ಮಕ್ಕಳು ವಿಶ್ ಮಾಡಲಿ ಎಂದು ಅಪ್ಪಂದಿರು ಹರಸುವ ದಿನ.. ಅದರಲ್ಲು ಭಾರತದಲ್ಲಿ ಈ ದಿನದ ಮಹತ್ವವೇ ಬೇರೆ. ಅಂತಹ ದಿನದಂದು ಟೀಮ್ ಇಂಡಿಯಾ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಎಂ ಎಸ್ ಧೋನಿಯ ಮಕ್ಕಳು ತಂದೆಗೆ ವಿಶೇಷವಾಗಿ ಶುಭ ಕೋರಿದ್ದಾರೆ.

ಟೀಮ್ ಇಂಡಿಯಾದ ಶ್ರೇಷ್ಠ ಬ್ಯಾಟರ್ ಗಳಾದ ಇಬ್ಬರು ನಾಯಕರಿಗೆ ತಮ್ಮ ಮಕ್ಕಳು ಫಾದರ್ಸ್ ಡೇ ಗೆ ವಿಶೇಷವಾಗಿ ಶುಭಕೋರಿದ್ದಾರೆ. ಎಂ ಎಸ್ ಧೋನಿಯ ಮಗಳು ಜೀವಾ ಧೋನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಪಂದಿರ ದಿನದಂದು ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

 

View this post on Instagram

 

A post shared by ZIVA SINGH DHONI (@ziva_singh_dhoni)

ಇತ್ತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ  ವಾಮಿಕಾ ಅವರ ಸಣ್ಣ ಹೆಜ್ಜೆಗುರುತುಗಳ ಚಿತ್ರವನ್ನು ಒಳಗೊಂಡ ಪೋಸ್ಟ್ ಅನ್ನು ಹಂಚಿಕೊಂಡಿದ್ದು,  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಹೆಚ್ಚಿನ ಸುದ್ದಿ