Sunday, July 7, 2024
Homeಕ್ರೈಂMass shooting : ಗುಂಪಿನ ಮೇಲೆ ಗುಂಡಿನ ದಾಳಿ - ಐವರನ್ನು ಕೊಂದು ಆತ್ಮಹತ್ಯೆಗೆ ಶರಣಾದ...

Mass shooting : ಗುಂಪಿನ ಮೇಲೆ ಗುಂಡಿನ ದಾಳಿ – ಐವರನ್ನು ಕೊಂದು ಆತ್ಮಹತ್ಯೆಗೆ ಶರಣಾದ ಹಂತಕ!

ಲಾಸ್ ವೇಗಾಸ್ [ಯುಎಸ್]: ಉತ್ತರ ಲಾಸ್ ವೇಗಾಸ್‌ನಲ್ಲಿ ಮಂಗಳವಾರ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 5 ಮಂದಿಯನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಬಳಿಕ ಪೊಲೀಸ್ ಕಾರ್ಯಾಚರಣೆ ವೇಳೆ ಶರಣಾಗದೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಎರಿಕ್ ಆಡಮ್ಸ್, ಎಂಬಾತ, ಸೋಮವಾರ ರಾತ್ರಿ ಎರಡು ಅಪಾರ್ಟ್ ಮೆಂಟ್ ಗಳಿಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದಾನೆ. ಈ ವೇಳೆ 13 ವರ್ಷದ ಬಾಲಕಿ ಸೇರಿ ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಗುಂಡೇಟಿಗೆ ಬಲಿಯಾಗಿದ್ದಾರೆ.
ಗುಂಡಿನ ದಾಳಿ ನಡೆಸಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.

ಹೆಚ್ಚಿನ ಸುದ್ದಿ