Sunday, July 7, 2024
Homeಟಾಪ್ ನ್ಯೂಸ್RAIN : ಕಾಫಿ ನಾಡಲ್ಲಿ ಭಾರೀ ಮಳೆ : ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ ತುಂಗ-ಭದ್ರಾ 

RAIN : ಕಾಫಿ ನಾಡಲ್ಲಿ ಭಾರೀ ಮಳೆ : ಪ್ರವಾಹ ಮಟ್ಟ ಮೀರಿ ಹರಿಯುತ್ತಿದೆ ತುಂಗ-ಭದ್ರಾ 

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಎನ್.ಆರ್ ಪುರ, ಮೂಡಿಗೆರೆ ತಾಲೂಕು ಸೇರಿದಂತೆ ಮಲೆನಾಡಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತುಂಗಾ ಮತ್ತು ಭದ್ರಾ ನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ.

ತುಂಗಾ ನದಿಯ ಪ್ರವಾಹದಿಂದಾಗಿ ಶೃಂಗೇರಿ ಶಾರದಾಂಬೆ ದೇವಸ್ಥಾನದ ಸ್ನಾನ ಘಟ್ಟ, ಕಪ್ಪೆ ಶಂಕರ ದೇವಸ್ಥಾನ, ಪ್ಯಾರಲಲ್ ರಸ್ತೆ ಮುಳುಗಡೆಯಾಗಿದೆ.

ಒಂದೆಡೆ ಕೆರೆಕಟ್ಟೆ ಭಾಗದಲ್ಲಿ ಮಳೆ ಹೆಚ್ಚಿದ ಹಿನ್ನೆಲೆ ತುಂಗಾ ನದಿ ನೀರಿನ ಪ್ರಮಾಣ ಏರಿಕೆಯಾಗಿದ್ದರೆ, ಇನ್ನೊಂದೆಡೆ ಪಶ್ಚಿಮ ಘಟ್ಟಗಳ‌ ಸಾಲಿನಲ್ಲಿ ಭಾರೀ ಮಳೆ ಹಿನ್ನೆಲೆ ಭದ್ರಾ ನದಿ  ನೀರಿನ ಪ್ರಮಾಣ ಹೆಚ್ಚಾಗಿದೆ. 

ಜಿಲ್ಲೆಯಾದ್ಯಂತ ರಾತ್ರಿಯಿಡೀ ಮಳೆ ಸುರಿದಿದ್ದು, ಬಾಳೆಹೊನ್ನೂರು – ಹೊರನಾಡು – ಕಳಸ ಸಂಪರ್ಕ‌ ಕಲ್ಪಿಸುವ‌ ಪ್ರಮುಖ ಸೇತುವೆ ಮುಳುಗಡೆ ಹಂತಕ್ಕೆ ತಲುಪಿದೆ. 

ಒಂದು ವೇಳೆ ಹೆಬ್ಬಾಳೆ ಸೇತುವೆ ಮುಳುಗಡೆಯಾದ್ರೆ ಸಂಪರ್ಕ ಬಂದ್ ಆಗುವ ಭೀತಿ ಇದ್ದು, ಒಂದು ವೇಳೆ ಮುಳುಗಡೆಯಾದರೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳಲಿದೆ. 

ಹೆಚ್ಚಿನ ಸುದ್ದಿ