Sunday, July 7, 2024
Homeಕ್ರೈಂBIHAR BRIDGE : ಬಿಹಾರದಲ್ಲಿ ಕಳೆದ 15 ದಿನಗಳಲ್ಲಿ 9 ಸೇತುವೆ ಕುಸಿತ 

BIHAR BRIDGE : ಬಿಹಾರದಲ್ಲಿ ಕಳೆದ 15 ದಿನಗಳಲ್ಲಿ 9 ಸೇತುವೆ ಕುಸಿತ 

ಬಿಹಾರದಲ್ಲಿ ಕಳೆದ 15 ದಿನಗಳಲ್ಲಿಯೇ ಸುಮಾರು ಒಂಬತ್ತು ಸೇತುವೆ ಕುಸಿತ ಘಟನೆಗಳು ನಡೆದಿದೆ. ಭಾರೀ ಮಳೆಯ ನಡುವೆ ಸಿವಾನ್ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಮೂರು ಸೇತುವೆಗಳು ಕುಸಿದು ಬಿದ್ದಿದೆ.

ಕಳೆದ 15 ದಿನಗಳಲ್ಲಿ ರಾಜ್ಯದಲ್ಲಿ ಒಂಬತ್ತನೇ ಘಟನೆಯಿದಾಗಿದ್ದು, ಇತ್ತೀಚಿನ ಸೇತುವೆ ಕುಸಿತ ಘಟನೆಯಲ್ಲಿ ಯಾವುದೇ ಸಾವುನೋವುಗಳು ಅಥವಾ ಗಾಯಗಳು ವರದಿಯಾಗಿಲ್ಲ.

ಸೇತುವೆ ಕುಸಿದ ಬಳಿಕ ಸಿವಾನ್‌ನ ಗಂಡಕ್ ಮತ್ತು ಧಾಮ್ಹಿ ನದಿಗಳ ಉದ್ದಕ್ಕೂ ಇರುವ ವಿವಿಧ ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಗಳು ಜಿಲ್ಲಾ ಕೇಂದ್ರದಿಂದ ಸಂಪರ್ಕ ಕಳೆದುಕೊಂಡಿದೆ.

ಸಿವಾನ್ ಜಿಲ್ಲೆಯ ಪಟೇರಾ, ಧಮಾಯಿ ಗ್ರಾಮಗಳಲ್ಲಿ, ಜಿಲ್ಲೆಯ ತೆವ್ಟಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸೇತುವೆ ಕುಸಿದ ಘಟನೆಗಳು ನಡೆದಿದೆ. ಜಿಲ್ಲೆಯ ಮಹಾರಾಜ್‌ಗಂಜ್ ಉಪವಿಭಾಗದ ಪತೇರಾ ಗ್ರಾಮದ ದೇವರಿಯಾದಲ್ಲಿ ಮೊದಲ ಘಟನೆ ವರದಿಯಾಗಿದೆ.

ಹೆಚ್ಚಿನ ಸುದ್ದಿ