Sunday, July 7, 2024
Homeಟಾಪ್ ನ್ಯೂಸ್SIM CARD: ಸಿಮ್ ಕಾರ್ಡ್ ಖರೀದಿಗೆ ಬಂತು ಹೊಸ ನಿಯಮ!

SIM CARD: ಸಿಮ್ ಕಾರ್ಡ್ ಖರೀದಿಗೆ ಬಂತು ಹೊಸ ನಿಯಮ!

ನವದೆಹಲಿ: ಮೊಬೈಲ್‌ ಸಿಮ್‌ ವಿನಿಮಯ ಅಥವಾ ಬದಲಾವಣೆ ವೇಳೆ ಅನೇಕ ಬಗೆಯ ವಂಚನೆಗಳು ನಡೆಯುತ್ತಿದ್ದು , ಈ ಪ್ರಕರಣಗಳಿಗೆ ಕಡಿವಾಣ ಹಾಕಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ‌ (ಟ್ರಾಯ್) ಹೊಸ ನಿಯಮಗಳನ್ನು ರೂಪಿಸಿದೆ.

ಗ್ರಾಹಕರು ಮೊಬೈಲ್‌ ಸಂಖ್ಯೆ ಬದಲಾಯಿಸದೆ ದೂರಸಂಪರ್ಕ ಸೇವಾದಾರರನ್ನು ಮಾತ್ರವಷ್ಟೆ ಬದಲಾಯಿಸುವ ಪೋರ್ಟಿಂಗ್‌ ವ್ಯವಸ್ಥೆಯಲ್ಲಿ ಅನೇಕ ಬದಲಾವಣೆಯನ್ನು ತರಲಾಗಿದೆ.

ಸಿಮ್‌ ಪೋರ್ಟಿಂಗ್‌ ವೇಳೆ ಗ್ರಾಹಕರು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ. ಈ ವೇಳ ಕೆಲವು ಖಾಸಗಿ ವ್ಯಕ್ತಿಗಳು ದೂರಸಂಪರ್ಕ ಸೇವಾದರರ ಮೂಲಕ ನೋಂದಾಯಿತ ಗ್ರಾಹಕರ ಸಿಮ್‌ ಬದಲಾಗಿ ಹೊಸ ಸಿಮ್‌ ಪಡೆದು ವಂಚನೆ ಮಾಡುತ್ತಿದ್ದ ಕೇಸ್ ಗಳು ಬಯಲಾಗಿದ್ದು, ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ನಿಯಮದಲ್ಲಿ ಬದಲಾವಣೆ ಮಾಡಲಾಗಿದೆ.

ಹೊಸ ನಿಯಮಗಳೇನು ಗೊತ್ತಾ?: ಮೊಬೈಲ್ ನಂಬರ್ ಪೋರ್ಟಬಿಲಿಟಿ ಮಾಡುವಾಗ ಅಥವಾ ಈಗ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಗಳ ಬದಲಿಗೆ ಅದೇ ನಂಬರ್‌ ಗೆ ಬೇರೊಂದು ಸಿಮ್ ಪಡೆಯುವಾಗ, ಯೂನಿಕ್ ಪೋರ್ಟಿಂಗ್ ಕೋಡ್ (ಯುಪಿಸಿ) ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ನೀವು ನಿಮ್ಮ ಸಿಮ್ ಕಾರ್ಡ್ ಬದಲಾಯಿಸುವಾಗ ಅಥವಾ ಪೋರ್ಟಬಿಲಿಟಿ ಮಾಡಲು ಅರ್ಜಿ ಸಲ್ಲಿಸಿದ 7 ದಿನಗಳವರೆಗೆ ಯುಪಿಸಿ ನೀಡಲಾಗುವುದಿಲ್ಲ.

ನಿಮ್ಮ ಕೈಗೆ ಸಿಮ್‌ ಸಿಕ್ಕರೂ ಸಹ ಯುಪಿಸಿ ಬರುವವರೆಗೂ ಅದು ಆ್ಯಕ್ಟಿವೇಟ್ ಮಾಡಲಾಗುವುದಿಲ್ಲ. ಆ ಯುಪಿಸಿ ನಂಬರ್ ಗಾಗಿ ನೀವು 7 ದಿನಗಳವರೆಗೆ ಕಾಯಬೇಕು. ಅಲ್ಲಿಯವರೆಗೂ ಸಿಮ್ ಕಾರ್ಡ್ ಇನ್ ಆ್ಯಕ್ಟಿವೇಟ್ ಆಗಿರಲಿದೆ. ಇದರಿಂದ ಆನ್ ಲೈನ್ ವಂಚಕರು ನಿಮ್ಮ ಮೊಬೈಲ್ ನಂಬರನ್ನು ಸ್ವಾಪ್ ಮಾಡಿ ನಕಲಿ ಸಿಮ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ಸುದ್ದಿ