Sunday, July 7, 2024
Homeಟಾಪ್ ನ್ಯೂಸ್Traffic Rules: ಸಂಚಾರ ನಿಯಮ ಉಲ್ಲಂಘನೆ - ಒಂದೇ ದಿನ ಬಿತ್ತು 851 ಕೇಸ್!

Traffic Rules: ಸಂಚಾರ ನಿಯಮ ಉಲ್ಲಂಘನೆ – ಒಂದೇ ದಿನ ಬಿತ್ತು 851 ಕೇಸ್!

ಬೆಂಗಳೂರು : ಟ್ರಾಫಿಕ್‌ ರೂಲ್ಸ್ ಪಾಲಿಸದವರ ವಿರುದ್ಧ ಮುಗಿಬಿದ್ದಿರುವ ಸಂಚಾರಿ ಪೊಲೀಸ್‌ ಇಲಾಖೆ ಒಂದೇ ದಿನ 851 ಕೇಸ್‌ ದಾಖಲಿಸಿದೆ.

ಪ್ರಮುಖವಾಗಿ ದ್ವಿ-ಚಕ್ರ ವಾಹನ ಸವಾರರು ಹೆಚ್ಚು ನಿಯಮ ಉಲ್ಲಂಘಿಸುತ್ತಿದ್ದು, ಇದರಿಂದ ಅಪಘಾತಗಳ ಹೆಚ್ಚಾಗಿವೆ. ಇದಕ್ಕೆಲ್ಲಾ ಬ್ರೇಕ್‌ ಹಾಕಲು ಪಶ್ಚಿಮ ವಿಭಾಗದ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಚಾಲಕರಿಗೆ ಚಾಟಿ ಬೀಸಿದ್ದಾರೆ.

ಒಟ್ಟೂ 851 ಪ್ರಕರಣಗಳನ್ನು ದಾಖಲಿಸುವುದರ ಜೊತೆಗೆ 4,33,600ರೂಪಾಯಿ ದಂಡವನ್ನು ಸಂಗ್ರಹಿಸಲಾಗಿದೆ. ಹಾಗೆಯೇ ಎಲ್ಲ ವಾಹನ ಚಾಲಕರು ಮತ್ತು ಸವಾರರು ಸಂಚಾರ ನಿಯಮವನ್ನು ಕಡ್ಡಯವಾಗಿ ಪಾಲನೆ ಮಾಡುವಂತೆ ಹಾಗೂ ಸಂಚಾರ ನಿಯಮದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು ಎಂದು ಪಶ್ಚಿಮ ವಿಭಾಗದ ಸಂಚಾರ ವಿಭಾಗದ ಉಪ ಪೊಲೀಸ್‌ ಆಯುಕ್ತ ಐಪಿಎಸ್‌ ಅನಿತಾ ಬಿ ಹದ್ದಣ್ಣವರ್‌ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹೆಚ್ಚಿನ ಸುದ್ದಿ