Sunday, July 7, 2024
Homeಕ್ರೈಂVIRAL NEWS : ತಡರಾತ್ರಿ ಮಣ್ಣಲ್ಲಿ ಹೂತಿದ್ದ ಮಗು : ಬೆಳಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ -...

VIRAL NEWS : ತಡರಾತ್ರಿ ಮಣ್ಣಲ್ಲಿ ಹೂತಿದ್ದ ಮಗು : ಬೆಳಗ್ಗೆ ಜೋಕಾಲಿಯಲ್ಲಿ ಪ್ರತ್ಯಕ್ಷ – VIDEO 

ಬೀದ‌ರ್ ಜಿಲ್ಲೆಯಲ್ಲಿ ಒಂದು ಬೆಚ್ಚಿಬೀಳುವ ಘಟನೆ ನಡೆದಿದ್ದು ಜನಕರನ್ನು ಆತಂಕಕ್ಕೀಡು ಮಾಡಿದೆ. ರಾತ್ರಿ ವೇಳೆ ಮಣ್ಣಲ್ಲಿ ಹೂತಿದ್ದ ಮಗು ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ಘಟನೆ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ನಡೆದಿದೆ. 

ಮಂಠಾಳ ಗ್ರಾಮದ ನಿವಾಸಿ ಅಂಬಯ್ಯ ಸ್ವಾಮಿ ಅವರ ಒಂದೂವರೆ ವರ್ಷದ ದೀಪ್ತಿ ಎಂಬ ಹೆಣ್ಣು ಮಗು ಶನಿವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿತ್ತು. ನಂತರ ತಡ ರಾತ್ರಿ 12ರ ಸುಮಾರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಕೂಡಿ ಮಗುವಿಗೆ ಗ್ರಾಮದ ಪಕ್ಕದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ತೆರಳಿದ್ದರು. 

ಆದರೆ ಮಾರನೇ ದಿವಸ ಬೆಳಿಗ್ಗೆ ಮಣ್ಣಲ್ಲಿ ಹೂತಿದ್ದ ಮಗು ಅಲ್ಲೇ ಪಕ್ಕದಲ್ಲಿದ್ದ ಜೋಕಾಲಿಯಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಪ್ರತ್ಯಕ್ಷವಾಗಿದೆ. ಇದನ್ನು ಕಂಡು ಇಡೀ ಗ್ರಾಮವೇ ಒಂದು ಕ್ಷಣ ಆತಂಕಗೊಂಡಿದ್ದು, ಅದೇ ಜಾಗದಲ್ಲಿ ಮತ್ತೆ ಮಗುವನ್ನು ಅಂತ್ಯಸಂಸ್ಕಾರ ಮಾಡಲಾಗಿದೆ. 

ಇನ್ನು ಮಣ್ಣಾಗಿದ್ದ ಮಗುವನ್ನು ಮಾಟ ಮಾಡುವ ಮಾಂತ್ರಿಕರು ಹೊರಗೆ ತೆಗೆದಿರಬಹುದು ಎಂದು ಕೆಲವರು ಹೇಳಿದರೆ, ಮಗುವಿನ ಮೇಲಿನ ಆಭರಣಗಳು ದೋಚುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ