Sunday, July 7, 2024
Homeಟೆಕ್/ ಆಟೋ ಲೋಕTech Tips: ಲ್ಯಾಪ್‌ಟಾಪ್‌ ಕ್ಲೀನ್‌ ಮಾಡುವಾಗ ಈ ಟ್ರಿಕ್ಸ್ ಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

Tech Tips: ಲ್ಯಾಪ್‌ಟಾಪ್‌ ಕ್ಲೀನ್‌ ಮಾಡುವಾಗ ಈ ಟ್ರಿಕ್ಸ್ ಗಳನ್ನು ನೆನಪಿನಲ್ಲಿಡಿ: ಇಲ್ಲದಿದ್ರೆ ಹಾಳಾದೀತು

ಇತ್ತೀಚಿನ ದಿನಗಳಲ್ಲಿ ಲ್ಯಾಪ್‌ಟಾಪ್‌ಗಳು ಬಹುತೇಕ ಎಲ್ಲರೂ ಹೊಂದಿರುವ ಪ್ರಮುಖ ಸಾಧನವಾಗಿದೆ. ಇದನ್ನು ಕಚೇರಿಯಿಂದ ಮನೆಗೆ- ಮನೆಯಿಂದ ಕಚೇರಿಗೆ ಸದಾ ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳು ಕೂಡ ಇಂದು ಲ್ಯಾಪ್‌ಟಾಪ್ ಬಳಸುತ್ತಾರೆ. ಲ್ಯಾಪ್​ಟಾಪ್​ನಲ್ಲಿ ಸ್ಕ್ರೀನ್ ಎಂಬುದು ತುಂಬಾ ಸೆನ್ಸಿಟಿವ್ ವಸ್ತು. ಸಣ್ಣದೊಂದು ಸ್ಕ್ರಾಚ್ ಅಥವಾ ರಾಸಾಯನಿಕಗಳ ಬಳಕೆಯು ಡಿಸ್ ಪ್ಲೇಯನ್ನು ಹಾನಿಗೊಳಿಸುತ್ತದೆ.

ಲ್ಯಾಪ್​ಟಾಪ್ ಡಿಸ್ ಪ್ಲೇಯನ್ನು ಸ್ವಚ್ಛಗೊಳಿಸುವ ಸಂದರ್ಭ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಸಾವಿರಾರು ರೂಪಾಯಿ ನಷ್ಟವಾಗಬಹುದು. ಲ್ಯಾಪ್‌ಟಾಪ್ ಅನ್ನು ಸ್ವಚ್ಛಗೊಳಿಸುವಾಗ ಕಾಳಜಿ ವಹಿಸಬೇಕಾದ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ.

ಲ್ಯಾಪ್‌ಟಾಪ್ ಸ್ವಚ್ಛಗೊಳಿಸುವಾಗ ಹೀಗೆ ಮಾಡಬೇಡಿ:

  • ಲ್ಯಾಪ್‌ಟಾಪ್ ಪರದೆಗಳನ್ನು ಸ್ವಚ್ಛಗೊಳಿಸಲು ರಾಸಾಯನಿಕಗಳನ್ನು ಬಳಸದಂತೆ ಅನೇಕ ತಜ್ಞರು ಶಿಫಾರಸು ಮಾಡುತ್ತಾರೆ. ಹಾಗೊಂದು ವೇಳೆ ನೀವು ಮಾಡಿದರೆ ಲ್ಯಾಪ್​ಟಾಪ್ ಪರದೆ ಹಾಗೂ ಹಾರ್ಡ್‌ವೇರ್ ಹಾನಿಗೊಳಗಾಗಬಹುದು.
  • ಸ್ಕ್ರೀನ್​ನಿಂದ ಧೂಳನ್ನು ತೆಗೆದುಹಾಕಲು ಯಾವುದೇ ರೀತಿಯ ಸ್ಪ್ರೇ ಅನ್ನು ಬಳಸಬೇಡಿ. ಇದು ಲ್ಯಾಪ್‌ಟಾಪ್‌ನ ಹಾರ್ಡ್‌ವೇರ್ ಮೇಲೆ ಪರಿಣಾಂ ಬೀರುತ್ತದೆ.
  • ಸ್ಕ್ರೀನ್ ಸ್ವಚ್ಛಗೊಳಿಸಲು ಆಲ್ಕೋಹಾಲ್ ಅಥವಾ ಯಾವುದೇ ರಾಸಾಯನಿಕಗಳನ್ನು ಬಳಸಬೇಡಿ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಟಿವಿಗಳು ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಎಲ್‌ಸಿಡಿ ಪರದೆಗಳನ್ನು ಬಳಸಲಾಗುತ್ತದೆ. ರಾಸಾಯನಿಕಗಳು ಅದನ್ನು ಹಾನಿಗೊಳಿಸಬಹುದು.

ಸ್ವಚ್ಛಗೊಳಿಸುವುದು ಹೇಗೆ?:

  • ಲ್ಯಾಪ್‌ಟಾಪ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಒಣ ಹತ್ತಿ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ.
  • ನೀವು ಉಪಯೋಗಿಸುವ ಬಟ್ಟೆ ಕೂಡ ಸ್ವಚ್ಛವಾಗಿರಬೇಕು. ಸ್ಕ್ರೀನ್ ಸ್ಕ್ರಾಚ್ ಆಗದಂತೆ ಬಟ್ಟೆಯಿಂದ ಒರಸಬೇಕು.
  • ಡಿಸ್ ಪ್ಲೇಯನ್ನು ಶುಚಿಗೊಳಿಸುವಾಗ, ಒತ್ತಡ ಹೇರಬಾರದು ಮತ್ತು ಹಾನಿಯಾಗದಂತೆ ನಿಮ್ಮ ಕೈಗಳಿಂದ ಮೃದುವಾಗಿ ಉಜ್ಜಬೇಕು.

  • ಸ್ಕ್ರೀನ್ ಕಲೆಯಾಗಿದ್ದರೆ, ಮೊದಲು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಿ. ನಂತರ ನೀವು ಸ್ವಲ್ಪ ಒದ್ದೆಯಾದ ಬಟ್ಟೆಯಿಂದ ಸ್ಕ್ರೀನ್ ಅನ್ನು ಒರೆಸಬಹುದು. ಆದರೆ ಒಳಗೆ ನೀರು ಬರದಂತೆ ಎಚ್ಚರವಹಿಸಿ.
  • ಪರದೆಯು ಇನ್ನೂ ಸ್ವಚ್ಛವಾಗದಿದ್ದರೆ, ಮೈಕ್ರೋಫೈಬರ್ ಬಟ್ಟೆಗೆ ಸ್ವಲ್ಪ ಸ್ಯಾನಿಟೈಸರ್ ಅನ್ನು ಅನ್ವಯಿಸಿ ಮತ್ತು ಅದನ್ನು ನಿಧಾನವಾಗಿ ಉಜ್ಜಿಕೊಳ್ಳಿ.
  • ಇದು LCD ಪರದೆಯಾಗಿದ್ದರೆ, ಯಾವುದೇ ರೀತಿಯ ರಾಸಾಯನಿಕಗಳನ್ನು ಬಳಸಬೇಡಿ. ಹಾಗೆಯೆ ಲ್ಯಾಪ್​ಟಾಪ್ ಸ್ಕ್ರೀನ್ ಅನ್ನು ವೃತ್ತಾಕಾರದ ಮೂಲಕ ಸ್ವಚ್ಛಗೊಳಿಸುವಾಗ.

ಹೆಚ್ಚಿನ ಸುದ್ದಿ