Sunday, July 7, 2024
Homeಕ್ರೀಡೆTEAM INDIA : ವಿಶ್ವಕಪ್‌ ಸಾಧನೆ : ಟೀಂ ಇಂಡಿಯಾ ಜೊತೆ ಸಂಭ್ರಮಿಸಿದ ಮೋದಿ ...

TEAM INDIA : ವಿಶ್ವಕಪ್‌ ಸಾಧನೆ : ಟೀಂ ಇಂಡಿಯಾ ಜೊತೆ ಸಂಭ್ರಮಿಸಿದ ಮೋದಿ – VIDEO

ನವದೆಹಲಿ : ವಿಶ್ವಕಪ್‌ ಸಾಧನೆಗೈದ ಟೀಂ ಇಂಡಿಯಾ ಆಟಗಾರರ ಜೊತೆ ಪ್ರಧಾನಿ ಮೋದಿ ಸಂಭ್ರಮಿಸಿದ್ದಾರೆ. ತಮ್ಮ ನಿವಾಸದಲ್ಲಿ ಆಟಗಾರರನ್ನು ಭೇಟಿ ಮಾಡಿದ ಮೋದಿ ಕ್ರಿಕೆಟಿಗರ ಜೊತೆ ಕೆಲ ಹೊತ್ತು ಕಳೆದರು.

ಟಿ20 ವಿಶ್ವಕಪ್​ ಟ್ರೋಫಿಯೊಂದಿಗೆ ತವರಿಗೆ ಮರಳಿದ ಟೀಮ್​ ಇಂಡಿಯಾ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಔತಣ ಮುಗಿಸಿ ಮುಂಬೈ ನತ್ತ ಪ್ರವಾಸ ಬೆಳೆಸಿದೆ.

ಟೀಂ ಇಂಡಿಯಾ ಆಟಗಾರರು ಪ್ರಧಾನಿ ಮೋದಿಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಬಳಿಕ ಮೋದಿ ಜತೆ ಭೋಜನಕೂಟದಲ್ಲಿ ಭಾಗಯಾಗಿದ್ದು, ಇದಾದ ಬಳಿಕ ಆಟಗಾರರು ವಿಶೇಷ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ.

ಈಗಾಗಲೇ ಮುಂಬೈನಲ್ಲಿ ವಿಶ್ವ ವಿಜೇತರಿಗೆ ಅದ್ದೂರಿ ಸ್ವಾಗತ ಏರ್ಪಡಿಸಿದ್ದು, ಇಂದು ಸಂಜೆ ವಿಜಯಯಾತ್ರೆ ಆಯೋಜಿಸಲಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸಂಜೆ 5 ಗಂಟೆಗೆ ಭಾರತ ತಂಡದ ಆಟಗಾರರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ.

ಇದಕ್ಕೂ ಮೊದಲು ಅಂದರೆ, ಸಂಜೆ 4 ಗಂಟೆಗೆ ಮರೀನ್‌ನಿಂದ ವಾಂಖೆಡೆ ಸ್ಟೇಡಿಯಂವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಬರಲಿದ್ದಾರೆ. ವಿಕ್ಟರಿ ಪರೇಡ್‌ನಲ್ಲಿ ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ. 

ಹೆಚ್ಚಿನ ಸುದ್ದಿ