Sunday, July 7, 2024
Homeಕ್ರೀಡೆTEAM INDIA : ವಿಮಾನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹಿಡಿದು ಸಂಭ್ರಮಿಸಿದ್ದು ಹೀಗೆ : VIDEO...

TEAM INDIA : ವಿಮಾನದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಹಿಡಿದು ಸಂಭ್ರಮಿಸಿದ್ದು ಹೀಗೆ : VIDEO ವೈರಲ್!

ಟಿ-20 ವಿಶ್ವಕಪ್ ಗೆದ್ದ ನಂತರ ತವರಿಗೆ ಮರಳಲು ಹಾತೊರೆಯುತ್ತಿದ್ದ ಭಾರತ ತಂಡದ ಆಟಗಾರರು ತವರಿಗೆ ಮರಳುವ ಹಾದಿಯಲ್ಲಿ ವಿಮಾನದಲ್ಲೇ ಟ್ರೋಫಿ ಹಿಡಿದು ಸಂಭ್ರಮಿಸಿದ ವೀಡಿಯೊ ಇದೀಗ ವೈರಲ್ ಆಗಿದೆ.

ಟಿ-20 ವಿಶ್ವಕಪ್ ಗೆದ್ದು 17 ವರ್ಷಗಳ ನಂತರ ಭಾರತಕ್ಕೆ ಪ್ರಶಸ್ತಿ ಬರ ನೀಗಿಸಿದ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡ ಸ್ವದೇಶಕ್ಕೆ ಮರಳಿತು. ಈ ವೇಳೆ ಬಾರ್ಬಡಾಸ್ ನಿಂದ ಭಾರತಕ್ಕೆ ಪ್ರಯಾಣದುದ್ದಕ್ಕೂ ಆಟಗಾರರು ಟ್ರೋಫಿ ಹಿಡಿದು ಸಂಭ್ರಮಿಸಿದರು.

ವಿಶ್ವಕಪ್ ಗೆದ್ದ ನಂತರ ತಮ್ಮ ಸಂಭ್ರಮವನ್ನು ಆಟಗಾರರು ಹಂಚಿಕೊಂಡಿದ್ದು, ಮೊಹಮದ್ ಸಿರಾಜ್, ಯಜುರ್ವೆಂದ್ರ ಚಾಹಲ್ ಹಾಗೂ ಇತರೆ ಆಟಗಾರರು ತಮ್ಮ ಕನಸು ನನಸಾದ ಬಗ್ಗೆ ವರ್ಣಿಸಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಆತಿಥ್ಯದಲ್ಲಿ ನಡೆದ ವಿಶ್ವಕಪ್ ನಲ್ಲಿ ಭಾರತ ತಂಡ ಒಂದೂ ಪಂದ್ಯ ಸೋಲದೇ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಆದರೆ ಹವಾಮಾನ ವೈಪರಿತ್ಯದಿಂದ ಭಾರತಕ್ಕೆ ಸ್ವದೇಶಕ್ಕೆ ಮರಳಲು ತಡವಾಗಿತ್ತು. ಬಿಸಿಸಿಐ ಆಟಗಾರರನ್ನು ವಿಶೇಷ ವಿಮಾನದ ಮೂಲಕ ತವರಿಗೆ ಕರೆಸಿಕೊಂಡಿತು.

ಗುರುವಾರ ಬೆಳಿಗ್ಗೆ ದೆಹಲಿಗೆ ವಿಶೇಷ ವಿಮಾನದ ಮೂಲಕ ಭಾರತ ತಂಡ ಆಗಮಿಸಿತು. ಆಟಗಾರರು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

ಬಿಸಿಸಿಐ ಭಾರತ ತಂಡದ ಆಟಗಾರರಿಗೆ ಮೆರವಣಿಗೆ ಆಯೋಜಿಸಿದ್ದು, ಪ್ರಧಾನಿ ಭೇಟಿ ನಂತರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತ ತಂಡ 7 ರನ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್ ಗೆದ್ದುಕೊಂಡಿತ್ತು. ನಂತರ ಚಂಡಮಾರುತದ ಕಾರಣ ಫೈನಲ್ ಪಂದ್ಯ ನಡೆದ ಬಾರ್ಬಡಾಸ್ ನಲ್ಲಿಯೇ ಕಳೆಯಬೇಕಾಯಿತು.

ಹೆಚ್ಚಿನ ಸುದ್ದಿ