Sunday, July 7, 2024
Homeಟಾಪ್ ನ್ಯೂಸ್KARWAR SCHOOL : ಸರ್ಕಾರದ ನಿರ್ಲಕ್ಷ್ಯ : ಶಿಕ್ಷಕಿಯರೇ ಶಾಲೆಯ ಕಾಂಪೌಂಡ್‌ ನಿರ್ಮಿಸಿದ್ರು!

KARWAR SCHOOL : ಸರ್ಕಾರದ ನಿರ್ಲಕ್ಷ್ಯ : ಶಿಕ್ಷಕಿಯರೇ ಶಾಲೆಯ ಕಾಂಪೌಂಡ್‌ ನಿರ್ಮಿಸಿದ್ರು!

ಕಾರವಾರ: ಜಿಲ್ಲೆಯ ಮೊದಲ ಸರ್ಕಾರಿ ಪ್ರೌಢಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ೧೫೩ ವರ್ಷದ ಇತಿಹಾಸ ಹೊಂದಿರುವ ಸರ್ಕಾರಿ ಶಾಲೆಯ ಕಾಂಪೌಂಡ್‌ ಗೆ ಶಿಕ್ಷಣ ಇಲಾಖೆಯಿಂದ ಯಾವುದೇ ಅನುದಾನ ಲಭಿಸದ ಕಾರಣ ಐವರು ಶಿಕ್ಷಕಿಯರೇ ಸ್ವಂತ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಕಾರವಾರ- ಕೋಡಿಬಾಗ ಮುಖ್ಯ ರಸ್ತೆಯ ವಿಸ್ತರಣೆಗಾಗಿ ೨೦೧೫ರಲ್ಲಿ ರಸ್ತೆ ವಿಸ್ತರಣೆಗೆಂದು ಕಾಂಪೌಂಡ್‌ ಕೆಡವಲಾಗಿತ್ತು. ಆದರೆ ಮತ್ತೆ ಅದನ್ನು ನಿರ್ಮಿಸುವ ಗೋಜಿಗೆ ಹೋಗಿರಲಿಲ್ಲ. ಈಗ ಶಿಕ್ಷಕಿಯರೇ ೬೦ ಸಾವಿರ ರೂ. ವೆಚ್ಚದಲ್ಲಿ ಸುಸಜ್ಜಿತ ಕಾಂಪೌಂಡ್‌ ನಿರ್ಮಿಸಿ ಮಾದರಿಯಾಗಿದ್ದಾರೆ.

ಈ ಸಂಬಂಧ ಶಿಕ್ಷಣ ಇಲಾಖೆಗೆ ಎಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈಗ ಒಟ್ಟು ೨೦೦ ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಕಾಂಪೌಂಡ್‌ ನಿರ್ಮಾಣ ಅಗತ್ಯವಾಗಿತ್ತು ಎಂಬುದು ಶಿಕ್ಷಕಿಯರ ನಿಲುವು. ಹೀಗಾಗಿ ತಾವೇ ಕಾಂಪೌಂಡ್‌ ನಿರ್ಮಾಣಕ್ಕೆ ಮುಂದಾಗಿದ್ದರು.

ಪ್ರಭಾರ ಮುಖ್ಯ ಶಿಕ್ಷಕಿ ಮೀನಾಕ್ಷಿ ನಾಯಕ, ಶಿಕ್ಷಕಿಯರಾದ ಮಮತಾ ಕುಮಾರಿ, ಮಂಗಲಾ ಹೆಗಡೆ, ಸವಿತಾ ಗೌಡ, ಶಿಲ್ಪಾ ಕಾಕರಮಠ ಅವರ ಈ ಕಾರ್ಯದಲ್ಲಿ ಕೆಲವು ವಿದ್ಯಾರ್ಥಿಗಳ ಪಾಲಕರು ಕೂಡ ಕಾಮಗಾರಿಯಲ್ಲಿ ನೆರವಾಗಿದ್ದಾರೆ.

ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ ಪ್ರತ್ಯೇಕ ಅನುದಾನವಿಲ್ಲ, ಹೀಗಾಗಿ ನಗರಸಭೆಯಿಂದ ಅನುದಾನ ಕೋರಲಾಗಿತ್ತು, ಆದರೆ ಸಿಕ್ಕಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಅಳಲು ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸುದ್ದಿ