Sunday, July 7, 2024
Homeಕ್ರೀಡೆT20 WORLD CUP: ಅಫ್ಘಾನಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ

T20 WORLD CUP: ಅಫ್ಘಾನಿಸ್ತಾನ ವಿರುದ್ಧ ಟಾಸ್‌ ಗೆದ್ದ ಭಾರತ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್ 2024ರ (T20 World Cup 2024) ಸೂಪರ್-8 ಸುತ್ತಿನಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ಭಾರತ (India) ಟಾಸ್‌ ಗೆದ್ದು, ಬ್ಯಾಟಿಂಗ್‌ ಆಯ್ದುಕೊಂಡಿದೆ.

ಟಿ20 ವಿಶ್ವಕಪ್ 2024 ರ ಸೂಪರ್-8 ಸುತ್ತು ಪ್ರಾರಂಭವಾಗಿದ್ದು, ಟೀಂ ಇಂಡಿಯಾ ಇಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಶ್ರೇಣಿಯಲ್ಲಿ 2 ಅಂಕಿ ಮೊತ್ತ ದಾಟದ ವಿರಾಟ್‌ ಕೊಹ್ಲಿ (Virat Kohli) ಈ ಪಂದ್ಯದಲ್ಲಿ ಅಬ್ಬರಿಸಲಿದ್ದಾರೆ ಎಂದು ಫ್ಯಾನ್ಸ್‌ ನೀರಿಕ್ಷೆಯಲ್ಲಿದ್ದಾರೆ.

ಅದೇ ರೀತಿ ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ ಕ್ರೀಡಾಂಗಣವು ಉತ್ತಮ ಪಿಚ್ ಆಗಿದ್ದು, ಬ್ಯಾಟರ್‌ಗಳಿಗೆ ಸೂಕ್ತವಾಗಿದೆ ಎಂದು ಸುನಿಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಪರ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್‌ ಕೀಪರ್‌), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್

ಅಫ್ಘಾನಿಸ್ತಾನ ಪರ:
ರಹಮಾನುಲ್ಲಾ ಗುರ್ಬಾಜ್ (ವಿಕೆಟ್‌ ಕೀಪರ್‌), ಇಬ್ರಾಹಿಂ ಝದ್ರಾನ್, ಹಜರತುಲ್ಲಾ ಝಜೈ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್, ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ನವೀನ್-ಉಲ್-ಹಕ್, ಫಜಲ್ಹಕ್ ಫಾರೂಕಿ

ಹೆಚ್ಚಿನ ಸುದ್ದಿ