Sunday, July 7, 2024
Homeಕ್ರೀಡೆT20 World Cup: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ - 56 ರನ್‌ ಗಳಿಗೆ...

T20 World Cup: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಅಫ್ಘಾನಿಸ್ತಾನ – 56 ರನ್‌ ಗಳಿಗೆ ಆಲೌಟ್!

ಸೌತ್ ಆಫ್ರಿಕಾ- ಅಫ್ಗಾನಿಸ್ತಾನ ತಂಡಗಳ ನಡುವಿನ ಟಿ20 ವಿಶ್ವಕಪ್‌ ನ ಮೊದಲ ಸೆಮಿಫೈನಲ್ ಮ್ಯಾಚ್ ಇಂದು ಬೆಳಗ್ಗೆ 6ರಿಂದ ಆರಂಭವಾಗಿದ್ದು. ಟಾಸ್‌ ಗೆದ್ದ ಅಫ್ಗಾನಿಸ್ತಾನ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದು, ಸೌತ್ ಆಫ್ರಿಕಾಗೆ 56 ರನ್‌ ಟಾರ್ಗೆಟ್‌ ನೀಡಿ ಆಲ್‌ ಔಟ್‌ ಆಗಿದೆ.

ಭಾರತ, ಇಂಗ್ಲೆಂಡ್, ಸೌತ್ ಆಫ್ರಿಕಾ ಮತ್ತು ಅಫ್ಗಾನಿಸ್ತಾನ ತಂಡಗಳು ಸೆಮೀಸ್ ಪ್ರವೇಶಿಸಿದೆ. ಆದರೆ ಸೆಮಿಫೈನಲ್ ಪಂದ್ಯಗಳಿಗೆ ಮಳೆಯ ಕಾಟ ಇದ್ದು ತಂಡಗಳಲ್ಲಿ ಭಯ ಹುಟ್ಟಿಸಿದೆ.

ಇದುವರೆಗೂ ಒಂದೂ ವರ್ಲ್ಡ್‌ಕಪ್ ಗೆಲ್ಲದ ಆಫ್ರಿಕಾ, ಈ ಸಲ ಟಿ20 ವಿಶ್ವಕಪ್ ಗೆಲ್ಲಲು ಪಣ ತೊಟ್ಟಿದೆ. ಆದರೆ ಅಫ್ಗಾನಿಸ್ತಾನ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಂತಹ ಬಲಿಷ್ಠ ತಂಡಗಳನ್ನೇ ಸೋಲಿಸಿ, ಫಸ್ಟ್ ಟೈಮ್ ಸೆಮೀಸ್ ಪ್ರವೇಶಿಸಿದೆ. ಹಾಗಾಗಿ ಫಸ್ಟ್ ಸೆಮಿಫೈನಲ್ ಜಿದ್ದಾಜಿದ್ದಿಯಿಂದ ಕೂಡಿರಲಿದೆ.

ಇಂದು ರಾತ್ರಿ 8ರಿಂದ ಭಾರತ-ಇಂಗ್ಲೆಂಡ್ ತಂಡಗಳು ಸೆಕೆಂಡ್ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.

ಹೆಚ್ಚಿನ ಸುದ್ದಿ