Sunday, July 7, 2024
Homeಕ್ರೀಡೆT20 WORLD CUP : ಬಾಂಗ್ಲಾ ವಿರುದ್ಧ ಗೆದ್ದು ದಾಖಲೆ ಬರೆದ ಅಫ್ಘಾನ್ : ಆಸೀಸ್...

T20 WORLD CUP : ಬಾಂಗ್ಲಾ ವಿರುದ್ಧ ಗೆದ್ದು ದಾಖಲೆ ಬರೆದ ಅಫ್ಘಾನ್ : ಆಸೀಸ್ ಟೂರ್ನಿಯಿಂದ ಔಟ್

ಸೂಪರ್‌ 8 ಹಂತದ ರೋಚಕ ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ ಗೆಲುವು ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಸೆಮಿಫೈನಲ್‌ ಹಂತವನ್ನು ಪ್ರವೇಶಿಸಿದೆ. 

ಟಾಸ್‌ ಗೆದ್ದ ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ ಗೆ 115 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಬಾಂಗ್ಲಾದೇಶ 105 ರನ್‌ಗಳಿಗೆ ಆಲೌಟ್ ಆಯಿತು. 

ಬಾಂಗ್ಲಾದೇಶ ತಂಡ ಈ ಪಂದ್ಯದಲ್ಲಿ 12 ಓವರ್‌ಗಳಲ್ಲಿ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ ಪ್ರವೇಶಿಸುವ ಕನಸು ಕಾಣುತ್ತಿತ್ತು. ಆದರೆ ಆಫ್ಘಾನಿಸ್ತಾನ ಬೌಲರ್‌ಗಳು ಅಮೋಘ ಬೌಲಿಂಗ್ ದಾಳಿ ನಡೆಸಿ ಅಬ್ಬರಿಸಿತು.

ಈ ಮೂಲಕ ಅಫ್ಘಾನ್ ಡಕ್ ವರ್ಥ್ ಲೂಯಿಸ್ ನಿಯಮದೊಂದಿಗೆ 8 ರನ್‌ಗಳಿಂದ ಗೆಲ್ಲುವುದರ ಜೊತೆಗೆ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿ, ಇತಿಹಾಸ ನಿರ್ಮಿಸಿದೆ. ಜೊತೆಗೆ ಉಪಾಂತ್ಯವನ್ನು ಪ್ರವೇಶಿಸುವ ಆಸ್ಟ್ರೇಲಿಯಾ ತಂಡದ ಕನಸು ನುಚ್ಚು ನೂರಾಗಿದೆ. 

ಇನ್ನು ಜೂನ್ 27 ರಂದು ತರುಬಾದಲ್ಲಿ ನಡೆಯಲಿರುವ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಅಫ್ಘಾನ್ ತಂಡ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. 

ಹೆಚ್ಚಿನ ಸುದ್ದಿ