Sunday, July 7, 2024
Homeಕ್ರೀಡೆT20 WORLD CUP: ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟ: ಬಾಂಗ್ಲಾಕ್ಕೆ 197 ರನ್‌ಗಳ ಬೃಹತ್‌ ಗುರಿ

T20 WORLD CUP: ಹಾರ್ದಿಕ್‌ ಪಾಂಡ್ಯ ಬಿರುಸಿನ ಆಟ: ಬಾಂಗ್ಲಾಕ್ಕೆ 197 ರನ್‌ಗಳ ಬೃಹತ್‌ ಗುರಿ

ವೆಸ್ಟ್‌ಇಂಡೀಸ್‌: ಟಿ20 ವಿಶ್ವಕಪ್‌ನ (T 20 World Cup) ಸೂಪರ್-8 ಹಂತದಲ್ಲಿ ಭಾರತ (India) ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಬಿರುಸಿನ ಆರಂಭ ಪಡೆದುಕೊಂಡಿತು. 3.4ನೇ ಓವರ್‌ನಲ್ಲಿ ತಂಡದ ಮೊತ್ತ 39 ರನ್‌ ಇದ್ದಾಗ ನಾಯಕ ರೋಹಿತ್‌ ಶರ್ಮಾ (23 ರನ್‌, 11 ಎಸೆತ, 3 ಬೌಂಡರಿ, 1 ಸಿಕ್ಸರ್‌) ರನ್‌ರೇಟ್ ಏರಿಸಲು ಹೋಗಿ ಶಕೀಬ್ ಅಲ್ ಹಸನ್‌ಗೆ ವಿಕೆಟ್‌ ಒಪ್ಪಿಸಿದರು.

ಇದರ ಹೊರತು ವಿರಾಟ್‌ ಕೊಹ್ಲಿ (37 ರನ್‌, 28 ಎಸೆತ, 1 ಬೌಂಡರಿ, 3 ಸಿಕ್ಸರ್‌), ರಿಷಬ್‌ ಪಂಥ್‌ (36 ರನ್‌, 24 ಎಸೆತ, 4 ಬೌಂಡರಿ, 2 ಸಿಕ್ಸರ್‌) ಹಾಗೂ ಶಿವಂ ದುಬೆ (34 ರನ್‌, 24 ಎಸೆತ, 3 ಸಿಕ್ಸರ್‌) ತಂಡಕ್ಕೆ ಆಸರೆಯಾದರು.

ಅಂತಿಮವಾಗಿ ಹಾರ್ದಿಕ್‌ ಪಾಂಡ್ಯ (50 ರನ್‌, 27 ಎಸೆತ, 4 ಬೌಂಡರಿ, 3 ಸಿಕ್ಸರ್‌) ರ ವೇಗಗತಿಯ ಆಟದ ನೆರವಿನಿಂದ ತಂಡವು 190ರ ಅಂಕಿ ದಾಟಿತು. ನಿಗದಿತ 20ಓವರ್‌ ಅಂತ್ಯಕ್ಕೆ ಭಾರತ 5 ವಿಕೆಟ್‌ ನಷ್ಟಕ್ಕೆ 196 ರನ್‌ ಗಳಿಸಿತು.

ಬಾಂಗ್ಲಾದೇಶದ ಪರ ತಂಝಿಮ್ ಹಸನ್ ಸಾಕಿಬ್ ಹಾಗೂ ರಿಶಾದ್ ಹೊಸೈನ್ ತಲಾ 2 ವಿಕೆಟ್‌, ಶಕೀಬ್ ಅಲ್ ಹಸನ್ 1 ವಿಕೆಟ್‌ ಪಡೆದರು.

ಹೆಚ್ಚಿನ ಸುದ್ದಿ