Sunday, July 7, 2024
Homeಕ್ರೀಡೆT20 WORLD CUP : ಫೈನಲ್‌ ಪಂದ್ಯದಲ್ಲಿ ಮಳೆ ಬಂದ್ರೆ ಏನಿದೆ ನಿಯಮ?

T20 WORLD CUP : ಫೈನಲ್‌ ಪಂದ್ಯದಲ್ಲಿ ಮಳೆ ಬಂದ್ರೆ ಏನಿದೆ ನಿಯಮ?

ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದೆ. ಬಾರ್ಬಡೋಸ್‌ನಲ್ಲಿ ಭಾರತ vs ದಕ್ಷಿಣ ಆಫ್ರಿಕಾ ನಡುವೆ ಫೈನಲ್ ಪಂದ್ಯ ನಡೆಯಲಿದ್ದು, ಕೆಲವೇ ಗಂಟೆಗಳು ಬಾಕಿಯಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಆತಂಕವಿದೆ

ಹೌದು.. ವೆಸ್ಟ್‌ ಇಂಡೀಸ್‌ – ಅಮೆರಿಕ ಆತಿಥ್ಯದಲ್ಲಿ ಈ ವಿಶ್ವಕಪ್‌ ನಡೆಯುತ್ತಿದ್ದು, ಅನೇಕ ಬಾರಿ ಮಳೆ ಎದುರಾಗಿತ್ತು. ಇದೀಗ ಈ ಫೈನಲ್‌ ಪಂದ್ಯದಲ್ಲೂ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಪ್ರಶಸ್ತಿ ಘೋಷಣೆ ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಐಸಿಸಿ ಮೀಸಲು ದಿನವನ್ನು ಇರಿಸಿದ್ದು, ಒಂದೊಮ್ಮೆ ನಿಗದಿತ ದಿನ ಪಂದ್ಯ ನಡೆಯದೇ ಇದ್ದರೆ, ಮೀಸಲು ದಿನಕ್ಕೆ ಮುಂದುವರಿಯಲಿದೆ. ಸೂಪರ್​ 8 ಹಂತದಲ್ಲಿ ಮತ್ತು ಸೆಮಿಫೈನಲ್​ ಪಂದ್ಯ ಮಳೆಯಿಂದ ಮೀಸಲು ದಿನವೂ ಫಲಿತಾಂಶ ಕಾಣದಿದ್ದರೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಸ್ಥಾನ ಮುಂದಿನ ಹಂತಕ್ಕೇರುತ್ತದೆ. ಆದರೆ ಫೈನಲ್​ ಪಂದ್ಯಕ್ಕೆ ಈ ನಿಯಮ ಅನ್ವಯವಾಗುವುದಿಲ್ಲ.

ಒಂದು ವೇಳೆ ನಿಗದಿತ ದಿನವಾದ ಶನಿವಾರ ಏನೂ ಆಟ ನಡೆಯದೇ ಹೋದರೆ ಅಥವಾ 2ನೇ ಬ್ಯಾಟಿಂಗ್ ಮಾಡಿದ ತಂಡಕ್ಕೆ ಕನಿಷ್ಠ 10 ಓವರ್ ಆಡಲು ಆಗದೇ ಇದ್ದರೆ, ಮೀಸಲು ದಿನಕ್ಕೆ ಪಂದ್ಯ ಮುಂದೂಡಲ್ಪಡುತ್ತದೆ. ಒಂದು ವೇಳೆ ಫೈನಲ್‌(T20 World Cup 2024) ಪಂದ್ಯ ಮೀಸಲು ದಿನದಲ್ಲಿಯೂ ನಡೆಯದೇ ಹೋದರೆ, ಆಗ ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.

ಹೆಚ್ಚಿನ ಸುದ್ದಿ