Sunday, July 7, 2024
Homeಕ್ರೀಡೆVIRAT KOHLI : ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿರಾಟ್-ರೋಹಿತ್ ವಿದಾಯ!

VIRAT KOHLI : ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ಗೆ ವಿರಾಟ್-ರೋಹಿತ್ ವಿದಾಯ!

ವೆಸ್ಡ್ ಇಂಡಿಸ್ : ಟಿ 20 ವಿಶ್ವಕಪ್ ನಲ್ಲಿ ಗೆದ್ದು ಬೀಗಿದ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ಕಿಂಗ್ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ-ಟ್ವೆಂಟಿ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಸರಣಿಯುದ್ದಕ್ಕೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕೊಹ್ಲಿ ಫೈನಲ್ ಪಂದ್ಯದಲ್ಲಿ ಅಮೋಘ ಆಟವಾಡಿ 76(59 ಎಸೆತ) ರನ್ ಗಳಿಸಿದ್ದರು.

ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿರಾಟ್ ”ಇದನ್ನೇ ನಾವು ಸಾಧಿಸಲು ಬಯಸಿದ್ದೆವು. ದೇವರು ದೊಡ್ಡವನು.ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆವು. ಇದು ಬಹಿರಂಗ ರಹಸ್ಯವಾಗಿತ್ತು.ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಎಂದರು.

ಐಸಿಸಿ ಟೂರ್ನಮೆಂಟ್ ಗೆಲ್ಲಲು ನಾವು ಕಾಯುತ್ತಿದ್ದೇವೆ. ನೀವು ರೋಹಿತ್‌ನಂತಹವರನ್ನು ನೋಡಿ, ಅವರು 9 ಟಿ20 ವಿಶ್ವಕಪ್‌ಗಳನ್ನು ಆಡಿದ್ದಾರೆ ಮತ್ತು ಇದು ನನ್ನ ಆರನೇ ವಿಶ್ವಕಪ್. ಅವರು ಅದಕ್ಕೆ ಅರ್ಹರು. ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟಕರವಾಗಿದೆ ಮತ್ತು ಅದು ನಂತರ ಮುಳುಗುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಅದ್ಭುತ ದಿನ ಮತ್ತು ನಾನು ಕೃತಜ್ಞನಾಗಿದ್ದೇನೆ’ ಎಂದು ಸಂಭ್ರಮದಲ್ಲೇ ವಿದಾಯ ಹೇಳಿದ್ದಾರೆ.

ರೋಹಿತ್ ಶರ್ಮಾ ಕೂಡ ವಿದಾಯ:
ಟಿ- ಟ್ವೆಂಟಿ ವಿಶ್ವಕಪ್ ವಿಜೇತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಇದೇ ವೇಳೆ ನಿವೃತ್ತಿ ಘೋಷಿ ಸಿದ್ದಾರೆ. ವಿಶ್ವಕಪ್ ಫೈನಲ್ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ- ಟ್ವೆಂಟಿ ಅಂತರಾಷ್ಟ್ರೀಯ ಕ್ರಿಕೇಟ್ ಗೆ ನಿವೃತ್ತಿ ಘೋಷಿಸಲು ಇದಕ್ಕಿಂತ ಒಳ್ಳೆಯ ಅವಕಾಶ ಬೇರೊಂದಿಲ್ಲ ಎಂದು ಸಂತಸದಿಂದಲೇ ನಿವೃತ್ತಿ ಘೋಷಿಸಿದರು.

ಹೆಚ್ಚಿನ ಸುದ್ದಿ