Sunday, July 7, 2024
Homeಕ್ರೀಡೆT-20 World Cup: ಕಪ್‌ ಗೆದ್ದ ಸಂಭ್ರಮ : ಆಟಗಾರರ ಭಾವುಕ ಕ್ಷಣಗಳು ಇಲ್ಲಿವೆ!

T-20 World Cup: ಕಪ್‌ ಗೆದ್ದ ಸಂಭ್ರಮ : ಆಟಗಾರರ ಭಾವುಕ ಕ್ಷಣಗಳು ಇಲ್ಲಿವೆ!

ವೆಸ್ಟ್ ಇಂಡಿಸ್: ಭಾರತಕ್ಕೆ ಕೊನೆಗೂ 13 ವರ್ಷಗಳ ಐಸಿಸಿ ಟ್ರೋಫಿ ಬರ ನೀಗಿದೆ. ಶನಿವಾರ ಟಿ-ಟ್ವೆಂಟಿ ವಿಶ್ವ ವಿಜೇತ ಭಾರತದ ಆಟಗಾರರು ಕಪ್ ಗೆದ್ದ ಸಂಭ್ರಮದಲ್ಲಿ ಭಾವುಕರಾಗಿದ್ದಾರೆ.

ರೋಹಿತ್ ಶರ್ಮಾ ಮಗುವಿನಂತೆ ತೆರಳಿ ವಿಶ್ವಕಪ್ ಪಡೆದು ಸಂಭ್ರಮಿಸಿದರು. ಬಳಿಕ ಮೈದಾನದ್ಯಂತ ಭಾರತ ತಂಡ ನಡೆದುಕೊಂಡು ಸಂಭ್ರಮಿಸಿದರು. ಕೋಚ್ ರಾಹುಲ್ ದ್ರಾವಿಡ್ ಕಪ್ ಅನ್ಙು ಎತ್ತಿ ಹಿಡಿದು ಸಂಭ್ರಮಿಸಿದರು. ಬಳಿಕ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಮೈದಾನಲ್ಲಿ ರೋಹಿತ್‌ ಶರ್ಮಾ ನೆಟ್ಟು ಸಂಭ್ರಮಿಸಿದರು

ವಿರಾಟ್ ಕೊಹ್ಲಿ ವೀಡಿಯೊ ಕಾಲ್ ಮೂಲಕ ಕಪ್ ಅನ್ನು ತನ್ನ ಕುಟುಂಬಕ್ಕೆ ತೋರಿಸಿ ಸಂಭ್ರಮಿಸಿದರು. ಟೀಂ ಕೊಚ್‌ ರಾಹುಲ್‌ ದ್ರಾವಿಡ್‌ರನ್ನು ಮಗುವಿನಂತೆ ಎತ್ತಾಡಿಸಿದ ಆಟಗಾರರ ಸಂಭ್ರಮಕ್ಕೆ ಪಾರವೇ ಇರಲಿಲ್ಲ

ಒಂದು ಹಂತದಲ್ಲಿ ಸೋಲುವ ಹಂತದಲ್ಲಿದ್ದ ಭಾರತ ಹರಸಾಹಸಪಟ್ಟು ಗೆದ್ದಿದೆ. ಗೆದ್ದ ಕೂಡಲೇ ವಿರಾಟ್‌, ರೋಹಿತ್‌, ಹಾರ್ದಿಕ್‌, ಸಿರಾಜ್‌ ಸೇರಿದಂತೆ ಎಲ್ಲಾ ಆಟಗಾರರ ಕಣ್ಣಂಚಲ್ಲಿ ನೀರು ಜಿನುಗಿದೆ. ರೋಹಿತ್ ಶರ್ಮಾ ನೆಲಕ್ಜೆ ಮುತ್ತಿಟ್ಟು ಕೆಲಕಾಲ ಭಾವುಕರಾದರು.

ಹಾರ್ದಿಕ್ ಪಾಂಡ್ಯ ಗೆಲುವಿನ ಕೊನೆಯ ಬಾಲ್ ಹಾಕಿ ಕುಸಿದು ಬಿದ್ದರು. ಭೂಮ್ರಾ, ಸಿರಾಜ್ ಮಾತನಾಡಲೂ ಸಾಧ್ಯವಾಗದೇ ಕಣ್ಣೀರಾದರು.
ಒಟ್ಟಿನಲ್ಲಿ ದಕ್ಷಿಣ ಆಫ್ರೀಕಾ ವಿರುದ್ಧ ಗೆದ್ದ ಕೂಡಲೇ ಇಡೀ ಭಾರತ ತಂಡವು ಆನಂದ ಭಾಷ್ಪದಿಂದ ತೊಯ್ದಾಡಿತು.

ಹೆಚ್ಚಿನ ಸುದ್ದಿ