Sunday, July 7, 2024
Homeಕ್ರೀಡೆT20 WORLD CUP : ಕೈಜಾರಿದ್ದ ಪಂದ್ಯವನ್ನು ಕ್ಯಾಚ್‌ ಹಾಕಿಕೊಂಡ ಸೂರ್ಯ - ಆ...

T20 WORLD CUP : ಕೈಜಾರಿದ್ದ ಪಂದ್ಯವನ್ನು ಕ್ಯಾಚ್‌ ಹಾಕಿಕೊಂಡ ಸೂರ್ಯ – ಆ ರೋಚಕ ಕ್ಯಾಚ್‌ ಹೇಗಿತ್ತು ಗೊತ್ತಾ? VIDEO

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ 7 ರನ್ ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ 13 ವರ್ಷಗಳ ಕಪ್ ಬರಗಾಲವನ್ನು  ನೀಗಿಸಿದೆ. ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಇಂತಹದೊಂದು ಕ್ಯಾಚ್ ಹಿಡಿದು ಜಗತ್ತನ್ನೇ ಅಚ್ಚರಿಗೊಳಿಸಿದರು. 

ದಕ್ಷಿಣ ಆಫ್ರಿಕಾ ಗೆಲುವಿಗೆ 6 ಎಸೆತಗಳಲ್ಲಿ 16 ರನ್‌ಗಳ ಅಗತ್ಯವಿದ್ದಾಗ, ಡೇವಿಡ್ ಮಿಲ್ಲರ್ ಮೊದಲ ಎಸೆತದಲ್ಲಿ ಬೃಹತ್ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿಯಲ್ಲಿದ್ದ ಸೂರ್ಯಕುಮಾರ್ ಯಾದವ್ ಸ್ಪೈಡರ್ ಮನ್ ನಂತೆ ಹಾರಿ ಆ ಕ್ಯಾಚ್ ಪಡೆದರು. 

 ಡೇವಿಡ್ ಮಿಲ್ಲರ್ ಔಟಾದ ನಂತರ ದಕ್ಷಿಣ ಆಫ್ರಿಕಾ ತಂಡದ ಸೋಲು ಖಚಿತವಾಯಿತು. ಈ ವಿಕೆಟ್ ಬಳಿಕ ಆಫ್ರಿಕಾ ತಂಡದ ಯಾವುದೇ ಬ್ಯಾಟ್ಸ್ಮನ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊನೆಗೂ ದಕ್ಷಿಣ ಆಫ್ರಿಕಾ ತಮ್ಮ ಚೋಕರ್ಸ್​ ಹಣೆಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ. 

 ಇನ್ನು ಈ ಪಂದ್ಯದಲ್ಲಿ  ಸೂರ್ಯಕುಮರ್ ಯಾದವ್ ಗೆ ಫ್ಲೈಯಿಂಗ್ ಕ್ಯಾಚ್ ಹಿಡಿಯುವ ಮೂಲಕ ಟೀಮ್ ಇಂಡಿಯಾ ಗೆಲುವಿನ ದಾರಿ ಸುಲಭವಾಗಿದ್ದು, ಹೀಗಾಗಿ ಬಿಸಿಸಿಐ ನ ಕಾರ್ಯದರ್ಶಿ ಜಯ್ ಶಾ ಬೆಸ್ಟ್ ಫೀಲ್ಡರ್ ಅವಾರ್ಡ್ ನೀಡಿ ಗೌರವಿಸಲಾಯಿತು. 

ಹೆಚ್ಚಿನ ಸುದ್ದಿ