Sunday, July 7, 2024
Homeಟಾಪ್ ನ್ಯೂಸ್SUNITA WILLIAMS: ಅಂತರಿಕ್ಷದಲ್ಲಿರುವ ಸುನೀತಾ ವಿಲಿಯಮ್ಸ್‌ ತಂಡ ಯಾವಾಗ ವಾಪಸ್‌?

SUNITA WILLIAMS: ಅಂತರಿಕ್ಷದಲ್ಲಿರುವ ಸುನೀತಾ ವಿಲಿಯಮ್ಸ್‌ ತಂಡ ಯಾವಾಗ ವಾಪಸ್‌?

ವಾಷಿಂಗ್ಟನ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಜೂ.5ರಂದು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದರು. ಆದರೆ ಅವರು ಭೂಮಿಗೆ ಮರಳುವುದು ತಿಂಗಳುಗಳೇ ತಡವಾಗಬಹುದು ಎನ್ನಲಾಗುತ್ತಿದೆ.

ಹೌದು… ಬೋಯಿಂಗ್ ಸ್ಟಾರ್‌ಲೈನರ್ ಯೋಜನೆಯು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಭೂಮಿಗೆ ಹಿಂತಿರುಗುವ ನಿಖರವಾದ ದಿನಾಂಕದ ಯಾವುದೇ ಪ್ರಕಟಣೆಯನ್ನು ನಾಸಾ ನೀಡಿಲ್ಲ. ನಾಸಾ ಇಬ್ಬರನ್ನು ವಾಪಸ್‌ ಕರೆಸಿಕೊಳ್ಳುವ ಯೋಜನೆಯನ್ನು ಮುಂದುಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬಾಹ್ಯಾಕಾಶದಲ್ಲಿ ಸಿಲುಕಿರುವ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಭೂಮಿಗೆ ಮರಳಲು ಕೆಲವು ತಿಂಗಳುಗಳು ಬೇಕಾಗಬಹುದು. ಸ್ಟಾರ್‌ಲೈನರ್‌ನ ಅವಧಿಯನ್ನು 45 ರಿಂದ 90 ದಿನಗಳವರೆಗೆ ವಿಸ್ತರಿಸುವ ಬಗ್ಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ ಯೋಚಿಸುತ್ತಿದೆ ಎಂದು ನಾಸಾದ ಮೂಲಗಳು ತಿಳಿಸಿವೆ.

ಘಟನೆಯೇನು?:
ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹಾಗೂ ಅಮೆರಿಕದ ಬ್ಯಾರಿ (ಬಚ್) ವಿಲ್ಲೋರ್ ಅವರು ಸಂಶೋಧನೆ ಮುಗಿಸಿ ಜೂ.14ರಂದು ಮರಳಿ ಬರಬೇಕಿದ್ದ ಅವರು ಇನ್ನೂ ಬಾರದಿರುವುದು ಇಡೀ ವಿಶ್ವದ ಆತಂಕಕ್ಕೆ ಕಾರಣವಾಗಿದೆ. ಸ್ಪೇಸ್ ಬಗ್ ಸಮಸ್ಯೆ ಪರಿಹರಿಸಿ ಸಂಶೋಧನೆ ಆರಂಭಿಸಿದವರಿಗೆ ಹೊಸ ಸಮಸ್ಯೆಯೊಂದು ಆರಂಭವಾಗಿದೆ. ಸುನೀತಾ ಪಯಣ ಬೆಳೆಸಿದ್ದ ಬೋಯಿಂಗ್ ನಿರ್ಮಿತ ಸ್ಟಾರ್‌ಲೈನರ್ ಸ್ಪೇಸ್‌ಕ್ರಾಪ್ಟಲ್ಲಿ ಹೀಲಿಯಂ ಸೋರಿಕೆಯಾಗುತ್ತಿರುವುದು ತಿಳಿದುಬಂದಿದೆ.

ಸ್ಪೇಸ್‌ಶಿಪ್‌ನಲ್ಲಿ ಹೀಲಿಯಂ ನಿರ್ದಿಷ್ಟ ಪ್ರಮಾಣದ ಒತ್ತಡ ಉಂಟುಮಾಡದೇ ಹೋದಲ್ಲಿ ನೌಕೆಗೆ ಬೇಕಾಗುವಷ್ಟು ಇಂಧನ ಹೊರಬರುವುದಿಲ್ಲ. ಹೀಲಿಯಂ ಈ ನೌಕೆಯ ಇಂಧನವಲ್ಲ. ಆಕ್ಸಿಜನ್ ಹಾಗೂ ಹೈಡೋಜನ್ ಬಳಸಿ ಚಲಿಸುವ ಸ್ಪೇಸ್ ಶಿಪ್‌ನ ಎಂಜಿನ್‌ಗೆ ಇಂಧನ ತಲುಪಲು ನಿರ್ದಿಷ್ಟ ಪ್ರಮಾಣದ ಹೀಲಿಯಂ ಆವಶ್ಯಕತೆ ಇರುತ್ತದೆ. ಹೀಗಾಗಿ ಜೂ.14ರಂದೇ ಮರಳಿ ಬರಬೇಕಿದ್ದ ಗಗನಯಾನಿಗಳ ತಂಡ ಇನ್ನೂ ಅಲ್ಲೇ ಉಳಿದಿದೆ.

ಭೂಮಿಯಿಂದ 400 ಕಿ.ಮೀ ದೂರದಲ್ಲಿರುವ ಐಎಸ್‌ಎಸ್‌ಗೆ ಪ್ರಯಾಣ ಮಾಡುವ ಗಗನಯಾನಿಗಳು ತಿಂಗಳುಗಟ್ಟಲೇ ಅಲ್ಲೇ ಉಳಿಯುವಷ್ಟು ವ್ಯವಸ್ಥೆ ಮಾಡಲಾಗಿರುತ್ತದೆ. ಐಎಸ್‌ಎಸ್‌ನಲ್ಲಿ ಗಗನಯಾನಿಗಳಿಗೆ ಊಟ, ವಸತಿ, ಚಿಕಿತ್ಸೆ, ಮನರಂಜನೆ ಸೇರಿ ಎಲ್ಲ ಮೂಲಭೂತ ವ್ಯವಸ್ಥೆಗಳಿವೆ. ಕನಿಷ್ಠ 45 ದಿನಗಳು ಯಾವುದೇ ತೊಂದರೆಯಿಲ್ಲದೇ ಗಗನಯಾನಿಗಳು ಇಲ್ಲಿರಬಹುದು.

ಹೆಚ್ಚಿನ ಸುದ್ದಿ