Sunday, July 7, 2024
Homeಟಾಪ್ ನ್ಯೂಸ್MILK POWDER : ಶಾಲೆಯಲ್ಲಿ ಹಾಲು ಕುಡಿದು ತುರಿಕೆ : ಆಸ್ಪತ್ರೆ ಪಾಲಾದ ಮಕ್ಕಳು!

MILK POWDER : ಶಾಲೆಯಲ್ಲಿ ಹಾಲು ಕುಡಿದು ತುರಿಕೆ : ಆಸ್ಪತ್ರೆ ಪಾಲಾದ ಮಕ್ಕಳು!

ಕೋಲಾರ : ಇಲ್ಲಿನ ಮುಳಬಾಗಿಲು ತಾಲೂಕಿನ ಅಂಗೊಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಯಿಶ್ಯೂರ್‌  ಹಾಲು ಪೌಡರ್‌ ನಿಂದ ತಯಾರಿಸಿದ್ದ ಹಾಲು ಸೇವಿಸಿದ್ದ ಶಾಲಾ ವಿದ್ಯಾರ್ಥಿನಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಲು ಕುಡಿದ ಬಳಿಕ 9 ನೇ ತರಗತಿಯ ವಿದ್ಯಾರ್ಥಿನಿಗೆ ತುರಿಕೆ ಜೊತೆಗೆ ಉಸಿರಾಟದ ಸಮಸ್ಯೆಯುಂಟಾಗಿದೆ. ಹೀಗಾಗಿ ಆಕೆಯನ್ನು ಮುಳಬಾಗಿಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಶಾಲೆಯಲ್ಲಿ ಹಾಲು ಕುಡಿದ ೧೯ಕ್ಕೂ ಹೆಚ್ಚು ಮಕ್ಕಳಿಗೆ ಚರ್ಮದ ತುರಿಕೆಯುಂಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಅಂಗೊಂಡಳ್ಳಿ ಶಾಲೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮಕ್ಕಳಿಗೆ ನೀಡಿದ ಹಾಲು ಪೌಡರ್ ಪಾಕೆಟ್ ವಶಕ್ಕೆ ಪಡೆದುಕೊಂಡು ಅದನ್ನು ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಂಡಿದ್ದಾರೆ.

ಶಾಲೆಯಲ್ಲಿ ಹಾಲು ಕುಡಿದು ಮಕ್ಕಳು ಅಸ್ವಸ್ಥರಾಗಿರುವುದನ್ನು ತಿಳಿದ ಪೋಷಕರು ಆತಂಕಗೊಂಡಿದ್ದಾರೆ. ಹಾಲಿನ ಪುಡಿಯಲ್ಲೇ ಏನಾದರೂ ಸೇರಿಕೊಂಡಿದೆಯೇ ಅಥವಾ ಅವಧಿ ಮುಗಿದ ಹಾಲಿನ ಪುಡಿ ಬಳಸಲಾಗಿದೆಯೇ ಎಂಬ ಬಗ್ಗೆ ಪರೀಕ್ಷೆಯ ಬಳಿಕ ಖಚಿತ ಮಾಹಿತಿ ಲಭಿಸಬೇಕಿದೆ.

ಹೆಚ್ಚಿನ ಸುದ್ದಿ