Sunday, July 7, 2024
Homeಟಾಪ್ ನ್ಯೂಸ್VIRAL NEWS: ಹೃದಯದ ಚಿತ್ರ ಬಿಡಿಸಿ ಭಾಗಗಳಿಗೆ ಹುಡುಗಿಯರ ಹೆಸರನ್ನು ಬರೆದ ವಿದ್ಯಾರ್ಥಿ!

VIRAL NEWS: ಹೃದಯದ ಚಿತ್ರ ಬಿಡಿಸಿ ಭಾಗಗಳಿಗೆ ಹುಡುಗಿಯರ ಹೆಸರನ್ನು ಬರೆದ ವಿದ್ಯಾರ್ಥಿ!

ನವದೆಹಲಿ: ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ (Student) ಹೃದಯದ (Heart) ಚಿತ್ರ ಬಿಡಿಸಿ, ಅದರ ಭಾಗಗಳನ್ನು ಹುಡುಗಿಯರ ಹೆಸರಿನಿಂದ ಹೆಸರಿಸಿದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಪರೀಕ್ಷೆಯೊಂದರಲ್ಲಿ ಹೃದಯದ ಚಿತ್ರ ಬಿಡಿಸಿ ಅದರ ಭಾಗಗಳನ್ನು ಹೆಸರಿಸಿ ಎಂದು ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ವಿದ್ಯಾರ್ಥಿಯಬ್ಬನು ಸುಂದರವಾಗಿ ಹೃದಯದ ಚಿತ್ರ ಬಿಡಿಸಿದ್ದಾನೆ. ಆದರೆ ಹೃದಯದ ಭಾಗಗಳನ್ನು ಹೆಸರಿಸುವಾಗ 5 ಹುಡುಗಿಯರ ಹೆಸರನ್ನು ಬರೆದಿದ್ದಾನೆ. ಹರಿತಾ, ಪಿಯಾ, ರೂಪ, ನಮಿತಾ ಮತ್ತು ಪೂಜಾ ಎಂದು ಹೆಸರಿಸಿದ್ದಾನೆ. ಅಷ್ಟೇ ಅಲ್ಲದೇ ಭಾಗಗಳ ಕಾರ್ಯಗಳನ್ನು ವಿವರಿಸುವಲ್ಲಿ ಆ ಹುಡುಗಿಯರ ಬಗ್ಗೆ ವಿವರಿಸಿದ್ದಾನೆ.

ಶಿಕ್ಷಕರು ಈ ಚಿತ್ರವನ್ನು ಗಮನಿಸಿ ನಂತರ ವಿದ್ಯಾರ್ಥಿಯ ಪೋಷಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಕಾಮೆಂಟ್‌ ಮಾಡಿದ್ದಾರೆ.

ಹೆಚ್ಚಿನ ಸುದ್ದಿ