Sunday, July 7, 2024
Homeಕ್ರೈಂBREAKING : ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್‌ಗೂ ಪವಿತ್ರ ಗೌಡಗೂ ಇದ್ಯಾ ಲಿಂಕ್!?

BREAKING : ಆತ್ಮಹತ್ಯೆ ಮಾಡಿಕೊಂಡ ಸೌಂದರ್ಯ ಜಗದೀಶ್‌ಗೂ ಪವಿತ್ರ ಗೌಡಗೂ ಇದ್ಯಾ ಲಿಂಕ್!?

ಸ್ಯಾಂಡಲ್‌ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸೌಂದರ್ಯ ಜಗದೀಶ್ ಅವರು ನಟ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರು ಮನೆ ಖರೀದಿಸಲು ದುಡ್ಡು ಕೊಟ್ಟಿದ್ದಾರೆ ಎನ್ನಲಾಗಿದೆ.

ಸೌಂದರ್ಯ ಜಗದೀಶ್ ಹಾಗೂ ಪವಿತ್ರಾ ಗೌಡ ಅವರ ನಡುವೆ ಕೋಟ್ಯಾಂತರ ರೂಪಾಯಿ ಹಣದ ವ್ಯವಹಾರ ನಡೆದಿದೆ. ಅಷ್ಟೇ ಅಲ್ಲ, ಸೌಂದರ್ಯ ಜಗದೀಶ್ ಅವರು ಪವಿತ್ರಾ ಗೌಡ ಅವರ ಮನೆ ಖರೀದಿಗೆ 2 ಕೋಟಿ ರೂಪಾಯಿ ಕೊಟ್ಟಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಸೌಂದರ್ಯ ಜಗದೀಶ್ ಅವರು ಹಣ ಕೊಟ್ಟ ಮರು ದಿನವೇ ಪವಿತ್ರಾ ಗೌಡ ಅವರು ರಾಜರಾಜೇಶ್ವರಿ ನಗರದಲ್ಲಿ ಮನೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. 

ಸೌಂದರ್ಯ ಜಗದೀಶ್ ಅವರು ಹಣ ಸಹಾಯ ಮಾಡಿದ್ರಾ ಅಥವಾ ಸಾಲ ಕೊಟ್ಟಿದ್ದಾರೋ ಎಂಬುದು ಇದುವರೆಗೆ ತಿಳಿದುಬಂದಿಲ್ಲ. 

ಆದರೆ 2017 ನವೆಂಬರ್ ನಲ್ಲಿ 1 ಕೋಟಿ ರೂ. ಹಾಗೇ 2018 ಜನವರಿಯಲ್ಲಿ 1 ಕೋಟಿ ರೂ.ಗಳನ್ನು ಪವಿತ್ರಾಗೌಡಗೆ ಕೊಟ್ಟಿದ್ದರು.  ಆದರೆ ಸೌಂದರ್ಯ ಜಗದೀಶ್ ಕುಟುಂಬದವರು ಈವರೆಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಲಾಗಿದೆ.

ಹೆಚ್ಚಿನ ಸುದ್ದಿ