Sunday, July 7, 2024
Homeಟಾಪ್ ನ್ಯೂಸ್SNAKE RESCUE : ಶಾಲೆಯಲ್ಲಿ ಹಾವು ಪ್ರತ್ಯಕ್ಷ!

SNAKE RESCUE : ಶಾಲೆಯಲ್ಲಿ ಹಾವು ಪ್ರತ್ಯಕ್ಷ!

ಗದಗ : ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೆಂದರೆ ಪ್ರಿಯವಾದ ಭೋಜನ. ಹೀಗಾಗಿ ಇಲಿಗಳನ್ನು ಹುಡುಕಿಕೊಂಡು ಹಾವುಗಳು ಸುಳಿದಾಡುತ್ತಿರುತ್ತವೆ. ಅಂತೆಯೇ ಗದಗದ ಸರ್ಕಾರಿ ಶಾಲೆಗೆ ಹಾವೊಂದು ಆಹಾರ ಅರಸಿ ಬಂದಿದೆ. 

ಜಿಲ್ಲೆಯ ನರಗುಂದ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಹಾವೊಂದು  ಇಲಿಯನ್ನು ಹುಡುಕಿಕೊಂಡು ಡೈರೆಕ್ಟ್ ಆಗಿ ಬಿಸಿಯೂಟದ ಅಡುಗೆ ಕೊಠಡಿಯಲ್ಲಿ ಕಾಣಿಸಿಕೊಂಡಿದೆ. 

ತಕ್ಷಣ ಶಿಕ್ಷಕರು ಸ್ನೇಕ್ ಬುಡ್ಡೇಸಾಬ ಸುರೇಬಾನ್ ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸದ್ಯ ಹಾವನ್ನು ಕಾಮನ್ ವುಲ್ ಸ್ನೇಕ್ ಎನ್ನಲಾಗಿದೆ. 

ಅಷ್ಟೇ ಅಲ್ಲದೆ ಹಾವು ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೇರೆ ಹಾವಿನ ಮರಿಗಳು ಪತ್ತೆಯಾಗಿದ್ದು, ಇದರಿಂದ ಭಯಗೊಂಡ ಶಾಲಾ ಸಿಬ್ಬಂದಿ ಕೊಠಡಿಯ ನೆಲ ಅಗೆದು ಹಾವು ಮೊಟ್ಟೆ, ಮರಿ ಪತ್ತೆ ಕಾರ್ಯ ನಡೆಸಿದ್ದಾರೆ. ಈ ವೇಳೆ ಯಾವುದೇ ಹಾವು ಇಲ್ಲದಿರುವುದನ್ನು ಕಂಡು ನಿರಾತಂಕಗೊಂಡಿದ್ದಾರೆ.

ಹೆಚ್ಚಿನ ಸುದ್ದಿ