Sunday, July 7, 2024
Homeಟಾಪ್ ನ್ಯೂಸ್SNAKE RESCUE : ಸ್ಕೂಟರ್‌ ಸೀಟಿನಲ್ಲಿ ಬೆಚ್ಚಗೆ ಮಲಗಿತ್ತು ಭಾರೀ ಹೆಬ್ಬಾವು! VIDEO

SNAKE RESCUE : ಸ್ಕೂಟರ್‌ ಸೀಟಿನಲ್ಲಿ ಬೆಚ್ಚಗೆ ಮಲಗಿತ್ತು ಭಾರೀ ಹೆಬ್ಬಾವು! VIDEO

ಮಳೆಗಾಲದಲ್ಲಿ ವಿಷಕಾರಿ ಹಾವುಗಳ ಉಪಟಳ ಹೆಚ್ಚು, ಈ ಸಮಯದಲ್ಲಿ ಬೆಚ್ಚಗಿರುವ ತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮನೆಯ ಮೂಲೆ, ಶೂ ಹಾಗೂ ಬೈಕ್ ಸೇರಿದಂತೆ ಇನ್ನಿತ್ತರ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕಾರಣ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. 

ನಾವು ಸ್ವಲ್ಪ ಎಡವಿದರು ಹಾವುಗಳಿಂದ ಪ್ರಾಣಕ್ಕೆ ಕುತ್ತು ಬರುವುದು ಖಂಡಿತ. ಇದೀಗ ಸ್ಕೂಟರಿನ ಪೆಟ್ರೋಲ್ ಟ್ಯಾಂಕ್‌ಗೆ ಸಣ್ಣ ಹೆಬ್ಬಾವೊಂದು ಸುತ್ತಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಮೈ ಜುಮ್ ಎನ್ನುವಂತಿದೆ.

ವಿಡಿಯೋದಲ್ಲಿ ಗಮನಿಸುವಂತೆ ಸ್ಕೂಟರಿನ ಬಳಿ ಹಾವು ಬುಸುಗುಡುವುದನ್ನು ಕೇಳಿದ ವ್ಯಕ್ತಿಯೊಬ್ಬ ಕೋಲನ್ನು ಹಿಡಿದು ಸೀಟು ಎತ್ತಲು ಪ್ರಯತ್ನಿಸುತ್ತಾನೆ. ಈ ವೇಳೆ ಸಣ್ಣ ಗಾತ್ರದ ಹೆಬ್ಬಾವೊಂದು ಪೆಟ್ರೋಲ್ ಟ್ಯಾಂಕ್ ಸುತ್ತ ಸುರುಳಿ ಸುತ್ತಿಕೊಂಡು ಮಲಗಿರುವುದು ಕಾಣಿಸುತ್ತದೆ. 

ಕೂಡಲೇ ಉರಗ ತಜ್ಞರಿಗೆ ಮಾಹಿತಿ ನೀಡಲಾಗುತ್ತದೆ. ಸ್ಥಳಕ್ಕೆ ಬಂದ ಉರಗ ತಜ್ಞ ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದೆ. 

 

ಹೆಚ್ಚಿನ ಸುದ್ದಿ