Sunday, July 7, 2024
Homeಟಾಪ್ ನ್ಯೂಸ್SIRIMANE FALLS : ಮಳೆಗೆ ಮತ್ತೆ ಜೀವಕಳೆ ಪಡೆದ ಸಿರಿಮನೆ ಜಲಪಾತ - VIDEO 

SIRIMANE FALLS : ಮಳೆಗೆ ಮತ್ತೆ ಜೀವಕಳೆ ಪಡೆದ ಸಿರಿಮನೆ ಜಲಪಾತ – VIDEO 

ಶೃಂಗೇರಿ : ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ಪ್ರವಾಸಿಗರನ್ನ ಸೆಳೆಯುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯದ್ಯಂತ ನಿರಂತರ ಮಳೆಯಾಗುತ್ತಿದ್ದು, ಶೃಂಗೇರಿ ತಾಲೂಕಿನ ಕಿಗ್ಗಾದಲ್ಲಿ  ನೀರಿಲ್ಲದೆ ಬತ್ತಿ ಹೋಗಿದ್ದ ಸಿರಿಮನೆ ಜಲಪಾತ ಮತ್ತೆ  ಜೀವ ಕಳೆ ಪಡೆದಿದೆ. 

ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ, ಬರೊಬ್ಬರಿ 100 ಅಡಿ ಎತ್ತರದಿಂದ ದುಮ್ಮಿಕ್ಕುತ್ತಿದ್ದು,  ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. 

ಮುಂಗಾರು ಮಳೆಯಲ್ಲೇ ಜಲಪಾತಕ್ಕೆ ಇಳಿದು ಪ್ರವಾಸಿಗರು ಫುಲ್​ ಎಂಜಾಯ್ ಮಾಡುತ್ತಿದ್ದು, ಕಲ್ಲು ಬಂಡೆಯ ಮೇಲೆ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. 

ಹೆಚ್ಚಿನ ಸುದ್ದಿ