Sunday, July 7, 2024
Homeಲೈಫ್ ಸ್ಟೈಲ್Evening Snacks: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಸಿಂಪಲ್ ದಹಿ ಆಲೂ ರೆಸಿಪಿ

Evening Snacks: ಸಂಜೆಯ ಸ್ನ್ಯಾಕ್ಸ್‌ಗೆ ತಯಾರಿಸಿ ಸಿಂಪಲ್ ದಹಿ ಆಲೂ ರೆಸಿಪಿ

ಸಂಜೆ ವೇಳೆ ಏನಾದ್ರೂ ಸಿಂಪಲ್ ಆಗಿ ಸ್ನ್ಯಾಕ್ಸ್ ತಯಾರಿಸಲು ಬಯಸುತ್ತೀರಾದರೆ ದಹಿ ಆಲೂ ಟ್ರೈ ಮಾಡಬಹುದು. ಹೆಸರೇ ಹೇಳುವಂತೆ ಆಲೂಗಡ್ಡೆ ಹಾಗೂ ಮೊಸರು ಬಳಸಿ ಮಾಡುವ ಈ ರೆಸಿಪಿಗೆ ಕೆಲವೇ ಮಸಾಲೆ ಪದಾರ್ಥಗಳು ಸಾಕು. ಮಕ್ಕಳು ಕೂಡಾ ಇಷ್ಟಪಟ್ಟು ಸವಿಯೋ ರೆಸಿಪಿ ಇದಾಗಿದ್ದು, ಫಟಾಫಟ್ ಅಂತ ತಯಾರಿಸಬೇಕಾಗಿ ಬಂದಾಗ ಖಂಡಿತಾ ಟ್ರೈ ಮಾಡಿ.

ಬೇಕಾಗುವ ಪದಾರ್ಥಗಳು:
ಆಲೂಗಡ್ಡೆ – 250 ಗ್ರಾಂ
ಮೊಸರು – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಚಾಟ್ ಮಸಾಲಾ – ಕಾಲು ಟೀಸ್ಪೂನ್

ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಹೆಚ್ಚಿದ ಕೊತ್ತಂಬರಿ ಸೊಪ್ಪು – 1 ಕಪ್
ಎಣ್ಣೆ – ಅಗತ್ಯಕ್ಕೆ ತಕ್ಕಂತೆ
ಮಾಡುವ ವಿಧಾನ:
* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ.
* ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಜೀರಿಗೆ ಹಾಕಿ ಹುರಿಯಿರಿ.

* ಬಳಿಕ ಆಲೂಗಡ್ಡೆ, ಉಪ್ಪು, ಚಾಟ್ ಮಸಾಲಾ, ಕೆಂಪು ಮೆಣಸಿನ ಪುಡಿ ಹಾಕಿ ಹುರಿದುಕೊಳ್ಳಿ.
* ನಂತರ ಮೊಸರು ಸೇರಿಸಿ ಮಿಶ್ರಣ ಮಾಡಿ.

* ಕೊನೆಯಲ್ಲಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ದಹಿ ಆಲೂ ಸವಿಯಲು ಸಿದ್ಧವಾಗುತ್ತದೆ.

ಹೆಚ್ಚಿನ ಸುದ್ದಿ