Sunday, July 7, 2024
Homeಕ್ರೈಂVIRAL NEWS : ಎಲಾ ಇವನಾ..! ಕಳ್ಳತನ ಮಾಡಿ ಸಿಸಿಟಿವಿ ಮುಂದೆ ಖದೀಮನ ಡ್ಯಾನ್ಸ್.! -...

VIRAL NEWS : ಎಲಾ ಇವನಾ..! ಕಳ್ಳತನ ಮಾಡಿ ಸಿಸಿಟಿವಿ ಮುಂದೆ ಖದೀಮನ ಡ್ಯಾನ್ಸ್.! – VIDEO

ಶೃಂಗೇರಿ : ಕಳ್ಳರ ತಂಡವೊಂದು ಒಂದೇ ದಿನದಲ್ಲಿ ನಾಲ್ಕು ಲಾಡ್ಜ್ ಗಳಿಗೆ ಕನ್ನ ಹಾಕಿದ್ದು, ಹಣ, ಅಮೂಲ್ಯ ವಸ್ತುಗಳನ್ನು ಬಿಟ್ಟು ಕೇವಲ ಲೆಡ್ಜರ್ ಪುಸ್ತಕಗಳನ್ನು ಹೊತ್ತೊಯ್ದ ವಿಚಿತ್ರ ಘಟನೆ ಶೃಂಗೇರಿ ಪಟ್ಟಣದಲ್ಲಿ ನಡೆದಿದೆ. 

ಲಾಡ್ಜ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು,  ಕಳ್ಳರು ಎಲ್ಲವನ್ನೂ ಬಿಟ್ಟು  ಪ್ರವಾಸಿಗರ ಮಾಹಿತಿ ಇರುವ ಲೆಡ್ಜರ್ ಪುಸ್ತಕವನ್ನೇ ಕಳವು ಮಾಡಿರುವ ಹಿಂದೆ ಸಾಕಷ್ಟು ಅನುಮಾನಗಳು ಮೂಡಿವೆ.  

ಒಂದೇ ದಿನ ನಾಲ್ಕು ಲಾಡ್ಜ್ ನಲ್ಲಿ ಪುಸ್ತಕ ಕದ್ದಿದ್ದು, ಯಾವುದಾದರೂ ಕ್ರೈಂ ಹಿಸ್ಟರಿ ಮುಚ್ಚಿ ಹಾಕುವ ಉದ್ದೇಶ ಇರಬಹುದಾ..? ಅಥವಾ  ಸೈಬರ್ ಸ್ಕ್ಯಾಮ್ ಗೆ ಡಾಟಾ ದುರ್ಬಳಕೆ ಮಾಡುವ ಉದ್ದೇಶದಿಂದ ಕಳುವು ಮಾಡಿದ್ದಾರಾ ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 

ಅಲ್ಲದೆ ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಯುವಕನೊಬ್ಬ ಲಾಡ್ಜ್ ನಲ್ಲಿ ಯುವಕ ಪುಸ್ತಕ ಕದ್ದು ಹೋಗುವ ವೇಳೆ ಸಿಸಿ ಕ್ಯಾಮೆರಾಕ್ಕೆ ಮುಖ ಮಾಡಿ ಡಾನ್ಸ್ ಮಾಡಿದ್ದು,  ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಯುವಕನ ಪತ್ತೆಗೆ ಬಲೆ ಬೀಸಿದ್ದಾರೆ.

ಹೆಚ್ಚಿನ ಸುದ್ದಿ