Sunday, July 7, 2024
Homeಕ್ರೀಡೆROHIT SHARMA : ಹಳೆಯ ದಾಖಲೆಗಳು ಉಡೀಸ್ : ಸಂತಸದಲ್ಲಿ ಕಣ್ಣೀರಿಟ್ಟ ರೋಹಿತ್ -...

ROHIT SHARMA : ಹಳೆಯ ದಾಖಲೆಗಳು ಉಡೀಸ್ : ಸಂತಸದಲ್ಲಿ ಕಣ್ಣೀರಿಟ್ಟ ರೋಹಿತ್ – VIDEO

ಟಿ20 ವಿಶ್ವಕಪ್​ನ ದ್ವಿತೀಯ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್​ ತಂಡವನ್ನು 68 ರನ್​ಗಳಿಂದ ಬಗ್ಗುಬಡಿದು ಫೈನಲ್​ ಪ್ರವೇಶಿಸಿದ್ದು, ತಂಡ ಎಂಟ್ರುಯಾಗುತ್ತಿದ್ದಂತೆ  ನಾಯಕ ರೋಹಿತ್​ ಶರ್ಮ ಈ ಸಂತಸದಲ್ಲಿ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್​ ಆಗಿದೆ.

2007ರಿಂದ ಎಲ್ಲ ಟಿ20 ವಿಶ್ವಕಪ್ ಆಡಿರುವ ರೋಹಿತ್​ ತಮ್ಮ ನಾಯಕತ್ವದಲ್ಲಿ ಇದೇ ಮೊದಲ ಬಾರಿಗೆ ತಂಡ ಫೈನಲ್​ ಪ್ರವೇಶಿಸಿತು. ಜತೆಗೆ 10 ವರ್ಷಗಳ ಬಳಿಕ ಭಾರತ ತಂಡ ಈ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೇರಿತು. ಈ ಎಲ್ಲ ಖುಷಿಯಿಂದ ರೋಹಿತ್​ ಕಣ್ಣೀರು ಸುರಿಸಿದರು.

 ಹೊಸ ಮೈಲಿಗಲ್ಲು ಸೃಷ್ಟಿಸಿದ ಹಿಟ್​ಮ್ಯಾನ್, 

ರೋಹಿತ್​ ಶರ್ಮ ನಿನ್ನೆಯ ಪಂದ್ಯದಲ್ಲಿ 4 ಬೌಂಡರಿ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಬೌಂಡರಿ ಬಾರಿಸಿದ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಈ ದಾಖಲೆ ಶ್ರೀಲಂಕಾದ ಮಾಜಿ ಆಟಗಾರ ಮಹೇಲ ಜಯವರ್ಧನೆ (111 ಬೌಂಡರಿ) ಹೆಸರಿನಲ್ಲಿತ್ತು.

ಇನ್ನು ಹಿಟ್​ಮ್ಯಾನ್​ ಬ್ಯಾಟಿಂಗ್ ನಲ್ಲಿ 37 ರನ್​ ಪೂರ್ತಿಗೊಳಿಸುತ್ತಿದ್ದಂತೆ ಭಾರತ ತಂಡದ ನಾಯಕನಾಗಿ ಎಲ್ಲ ಮಾದರಿಯ ಕ್ರಿಕೆಟ್​ ಸೇರಿ 5 ಸಾವಿರ ರನ್​ ಪೂರೈಸಿದ್ದು, ಈ ಸಾಧನೆ ಮಾಡಿದ ಭಾರತದ 5ನೇ ನಾಯಕ ಎನಿಸಿಕೊಂಡರು. 

ನಾಯಕನಾಗಿ ಐದು ಸಾವಿರ ರನ್ ಪೂರೈಸಿದ ಪಟ್ಟಿಯಲ್ಲಿ ರನ್ ಮಿಷನ್ ಖ್ಯಾತಿಯ ವಿರಾಟ್ ಕೊಹ್ಲಿ (12883) ಅಗ್ರಸ್ಥಾನದಲ್ಲಿದ್ದರೆ, ಮಾಜಿ ನಾಯಕ ಮಹೇಂದ್ರ ಸಿಂಗ್​(11207) ಎರಡನೇ ಸ್ಥಾನದಲ್ಲಿದ್ದಾರೆ. 

ಹೆಚ್ಚಿನ ಸುದ್ದಿ