Sunday, July 7, 2024
Homeಕ್ರೀಡೆBCCI : ಮುಂದಿನ ಕೋಚ್ ಬಗ್ಗೆ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ 

BCCI : ಮುಂದಿನ ಕೋಚ್ ಬಗ್ಗೆ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ 

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವಧಿ ಅಂತ್ಯವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐ ನ ಅಧ್ಯಕ್ಷ ರೋಜರ್ ಬಿನ್ನಿ ಮುಂದಿನ ಕೋಚ್ ಬಗ್ಗೆ ಮಹತ್ವದ ಸುಳಿವೊಂದು ನೀಡಿದ್ದಾರೆ.

ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಗೌತಮ್ ಗಂಭೀರ್ ಭಾರತದ ಕೋಚ್ ಪಾತ್ರವನ್ನು ವಹಿಸಿದರೆ ಅದು ಭಾರತೀಯ ಕ್ರಿಕೆಟ್ ತಂಡಕ್ಕೆ ಒಳ್ಳೆಯದು ಎಂದು ಹೇಳಿದರು.

2021ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾವನ್ನು ಕಟ್ಟಿ ಬೆಳೆಸುವಲ್ಲಿ ಹಗಲು ರಾತ್ರಿ ದುಡಿದಿದ್ದಾರೆ. ಈಗ ಅವರ ಉತ್ತರಾಧಿಕಾರಿಯಾಗಿ ಗೌತಮ್ ಗಂಭೀರ್ ಆಯ್ಕೆಯಾಗಬೇಕು ಎಂದು ರೋಜರ್ ಬಿನ್ನಿ ಹೇಳಿದ್ದಾರೆ. 

ಗೌತಮ್ ಗಂಭೀರ್ ಅವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಅವರು ಈ ಕೆಲಸವನ್ನು ತೆಗೆದುಕೊಂಡರೆ ಅದು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ ಗೆ. ಒಳ್ಳೆಯದು. ಅವರು ಅನುಭವ ಭಾರತಕ್ಕೆ ಬೇಕಾಗಿದೆ. 

ಭಾರತಕ್ಕೆ ಆಟದ ಮೂರು ಸ್ವರೂಪಗಳನ್ನು ಆಟವನ್ನು ಆಡಿದ ತರಬೇತುದಾರರ ಅಗತ್ಯವಿದೆ ಮತ್ತು ಅವರು ಎಲ್ಲದರಲ್ಲೂ ಆಡಿದ್ದಾರೆ ಎಂದು ಬಿನ್ನಿ ಎಎನ್‌ಐಗೆ ತಿಳಿಸಿದರು.

ಇನ್ನು ನಾಯಕ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಚುಟುಕು ಮಾದರಿ ಕ್ರಿಕೆಟ್ ಗೆ ವಿದಾಯದ ಬಗ್ಗೆ ಮಾತನಾಡಿದ ರೋಜರ್ ಬಿನ್ನಿ, ಅವರು ಅದ್ಭುತ ಆಟಗಾರರು, ಕೂಡಲೇ ಅವರನ್ನು ರಿಪ್ಲೇಸ್ ಮಾಡುವುದು ಕಷ್ಟ. ಈ ಕ್ಷಣದಲ್ಲಿ ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟ. ಆದರೆ ನಮಗೆ ಯುವ ಆಟಗಾರರು ಸಿಗುವ ವಿಶ್ವಾಸವಿದೆ” ಎಂದರು.

 

ಹೆಚ್ಚಿನ ಸುದ್ದಿ