Sunday, July 7, 2024
Homeಟಾಪ್ ನ್ಯೂಸ್Viral : ನಾಯಿ ಮಾಂಸ ತಿಂದರಾ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ!

Viral : ನಾಯಿ ಮಾಂಸ ತಿಂದರಾ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಜೂನ್ ರಾಬರ್ಟ್ ಕೆ. ಕೆನಡಿ ಈಗ ಕೊರಿಯಾ ಭೇಟಿ ವೇಳೆ ಶ್ವಾನ ಮಾಂಸ ಸೇವಿಸಿದ್ದಾರೆ ಎಂಬ ವಿವಾದ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

2010ರಲ್ಲಿ ಕೊರಿಯಾ ಪ್ರವಾಸದ ವೇಳೆ ಶ್ವಾನ ಮಾಂಸಕ್ಕೆ ಹೆಸರಾದ ಹೋಟೆಲ್ ಗೆ ಭೇಟಿ ನೀಡಿದ ವೇಳೆ ನಾಯಿ ಮಾಂಸಕ್ಕೆ ಬಾಯಿ ಹಾಕುತ್ತಿರುವ ಫೋಟೊ ಈಗ ವೈರಲ್ ಆಗಿದೆ.

ಫೋಟೊ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಜೂನಿಯರ್ ರಾಬರ್ಟ್ ಕೆನಡಿ, ನಾವು ಏಷ್ಯಾ ಪ್ರವಾಸ ಕೈಗೊಂಡ ವೇಳೆ ತೆಗೆದ ಫೋಟೊ ಇದಾಗಿದೆ. ಆದರೆ ನಾನೆಂದೂ ನಾಯಿ ಮಾಂಸವನ್ನು ಸೇವಿಸಿಲ್ಲ. ಅದು ಫೋಟೊಗಾಗಿ ನೀಡಿದ ಫೋಸ್ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.

ನಾನು ಆಡುಮರಿಯನ್ನು ಸೇವಿಸಿದ ಚಿತ್ರ ಇದಾಗಿದೆ. ಆದರೆ ಇದು ನಾಯಿ ಮಾಂಸ ಎಂದು ಬಿಂಬಿಸಲಾಗಿದೆ. ನಿಜವಾದ ಮಾಂಸಹಾರಿಗಳಿಗೆ ಇದು ಚೆನ್ನಾಗಿ ಗೊತ್ತಾಗುತ್ತದೆ. ನಾಯಿ ಯಾವುದು ಆಡು ಮರಿ ಯಾವುದು ಎಂಬುದು. ಕೆಲವು ಸಸ್ಯಹಾರಿಗಳು ಗೊತ್ತಿಲ್ಲದೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ಹೆಚ್ಚಿನ ಸುದ್ದಿ