Sunday, July 7, 2024
Homeಚುನಾವಣೆ 2023Telangana CM :  ರೇವಂತ್‌ ರೆಡ್ಡಿ ತೆಲಂಗಾಣ ಸಿಎಂ – ನಾಳೆಯೇ ಪ್ರಮಾಣವಚನ

Telangana CM :  ರೇವಂತ್‌ ರೆಡ್ಡಿ ತೆಲಂಗಾಣ ಸಿಎಂ – ನಾಳೆಯೇ ಪ್ರಮಾಣವಚನ

ನವದೆಹಲಿ :  ತೆಲಂಗಾಣದ ಮುಂದಿನ ಮುಖ್ಯಮಂತ್ರಿಯಾಗಿ (Telangana CM) ಅನುಮೂಲ ರೇವಂತ್‌ ರೆಡ್ಡಿ (Anumula Revant reddy) ಆಯ್ಕೆ ಖಚಿತವಾಗಿದೆ. ಕಾಂಗ್ರೆಸ್‌ (Congress) ವರಿಷ್ಠ ರಾಹುಲ್‌  ಗಾಂಧಿ (Rahul gandhi) ಮಂಗಳವಾರ ಇದನ್ನು ಖಚಿತಪಡಿಸಿದ್ದಾರೆ. ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ (Oath taking ceremony)  ನಡೆಯಲಿದ್ದು, ದೇಶದ ಹಿರಿಯ ಕಾಂಗ್ರೆಸ್‌ ಮುಖಂಡರು ಭಾಗವಹಿಸಲಿದ್ದಾರೆ.

ನ .30 ರಂದು ಚುನಾವಣೆ ನಡೆದು ಡಿ. 3 ರಂದು ಫಲಿತಾಂಶ ಹೊರಬಿದ್ದಿತ್ತು. ಕಾಂಗ್ರೆಸ್‌ ಪಕ್ಷವು ಆಡಳಿತಾರೂಡ ಬಿಎಸ್‌ಆರ್‌ ಪಕ್ಷದ ವಿರುದ್ಧ ಪ್ರಚಂಡ ಜಯ ಸಾಧಿಸಿತ್ತು. ಸೋಮವಾರ ನಡೆದಿದ್ದ ತೆಲಂಗಾಣ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಸಿಎಂ ಆಯ್ಕೆ ನಿರ್ಧಾರವನ್ನು ಹೈಕಮ್ಯಾಂಡ್‌ ವಿವೇಚನೆಗೆ ಬಿಡುವ ಒಂದು ಸಾಲಿನ ನಿರ್ಣಯ ಕೈಗೊಳ್ಳಲಾಗಿತ್ತು.

ಇಂದು ತೆಲಂಗಾಣ ಸಿಎಂ ಆಯ್ಕೆ ಬಗ್ಗೆ ನವದೆಹಲಿಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಕಾಂಗ್ರಸೆ್‌ ವರಿಷ್ಠ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಸಭೆಯಲ್ಲಿ ಹಾಜರಿದ್ದರು.

ಉಳಿದಂತೆ ಎನ್‌ ಉತ್ತಮ್‌ ಕುಮಾರ್‌ ರೆಡ್ಡಿ, ಭಟ್ಟಿ ವಿಕ್ರಮಾರ್ಕ , ಕೋಮಟಿ ರೆಡ್ಡಿ ವೆಂಕಟ್‌ ರೆಡ್ಡಿ ಹಾಗೂ ದಾಮೋದರ್‌ ರಾಜನರಸಿಂಹ ಸಿಎಂ ರೇಸ್‌ ನಲ್ಲಿದ್ದರು. ಅಸಮಾಧಾನಿತರನ್ನು ತಣಿಸಲು 1-2 ಡಿಸಿಎಂ ಹುದ್ದೆಗಳನ್ನು ಸೃಷ್ಟಿಸಲಾಗವುದೆಂಬ ವದಂತಿಯೂ ಕಾಂಗ್ರೆಸ್‌ ಅಂಗಳದಲ್ಲಿ ಕೇಳಿಬಂದಿದೆ.

ಹೆಚ್ಚಿನ ಸುದ್ದಿ