Sunday, July 7, 2024
Homeಲೈಫ್ ಸ್ಟೈಲ್Mango Rasam: ಮಧ್ಯಾಹ್ನ ಊಟಕ್ಕೆ ಮಾಡಿ ಸವಿಯಿರಿ ರುಚಿ ರುಚಿಯಾದ ಮಾವಿನಕಾಯಿ ರಸಂ; ಇಲ್ಲಿದೆ ರೆಸಿಪಿ

Mango Rasam: ಮಧ್ಯಾಹ್ನ ಊಟಕ್ಕೆ ಮಾಡಿ ಸವಿಯಿರಿ ರುಚಿ ರುಚಿಯಾದ ಮಾವಿನಕಾಯಿ ರಸಂ; ಇಲ್ಲಿದೆ ರೆಸಿಪಿ

ಮಾವಿನಕಾಯಿ ಬಳಸಿ ಮಾಡುವ ಅನೇಕ ಬಗೆಯ ನಳಪಾಕವನ್ನು ಈ ಸಮಯದಲ್ಲಿ ಮಾಡುವುದೇ ಸೂಕ್ತ. ಇಲ್ಲದಿದ್ದರೆ ಮಾವಿನಕಾಯಿಗಾಗಿ ಮುಂದಿನ ವರ್ಷದ ತನಕ ಕಾಯಬೇಕಾಗುತ್ತದೆ.

ಮಾವಿನ ಕಾಯಿ ಬಳಸಿ ನೂರಕ್ಕೂ ಹೆಚ್ಚು ಅಡುಗೆಗಳನ್ನು ತಯಾರಿಸಬಹುದು. ಇಲ್ಲಿ ನಾವು ಮಧ್ಯಾಹ್ನ ಅನ್ನದ ಜೊತೆ ತಿನ್ನಲು ಮಾವಿನ ಕಾಯಿ ಸಾರು ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಪದಾರ್ಥಗಳು…

ಮಾವಿನಕಾಯಿ– 1
ತೊಗರಿಬೇಳೆ – ಕಾಲು ಕಪ್‌ (ಬೇಯಿಸಿಕೊಂಡಿದ್ದು)
ತುಪ್ಪ– 1 ಚಮಚ
ಸಾಸಿವೆ – ಅರ್ಧ ಚಮಚ
ಜೀರಿಗೆ – 1 ಟೀ ಚಮಚ
ಕರಿಬೇವು – 5 ರಿಂದ 6
ಹಸಿಮೆಣಸಿನಕಾಯಿ – 2


ಇಂಗು– ಚಿಟಿಕೆ
ಶುಂಠಿ – 1 ಇಂಚು
ಟೊಮೆಟೊ – 1 ದೊಡ್ಡದು (ಸಣ್ಣಗೆ ಹೆಚ್ಚಿದ್ದು)
ಜೀರಿಗೆ ಪುಡಿ– 1 ಚಮಚ
ನಿಂಬೆರಸ– 1 ಚಮಚ
ಕಾಳುಮೆಣಸಿನ ಪುಡಿ – ಚಿಟಿಕೆ
ಅರಿಶಿನ ಪುಡಿ – ಚಿಟಿಕೆ
ದನಿಯಾ ಪುಡಿ– 1 ಚಮಚ
ಬೆಲ್ಲ – 1 ಸಣ್ಣ ತುಂಡು
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – 2 ಚಮಚ (ಹೆಚ್ಚಿದ್ದು)
ಒಣಗಿದ ಮೆಣಸಿನಕಾಯಿ- 1

ಮಾಡುವ ವಿಧಾನ…

ಮಾವಿನಕಾಯಿಯನ್ನು ಚೆನ್ನಾಗಿ ತೊಳೆದು ಕುಕ್ಕರ್‌ಗೆ ಹಾಕಿ 2 ಲೋಟ ನೀರು ಸೇರಿಸಿ 5 ರಿಂದ 6 ವಿಶಲ್‌ ಕೂಗಿಸಿ. ವಿಶಲ್‌ ಆರಿದ ಮೇಲೆ ಸಿಪ್ಪೆ ಹಾಗೂ ಗೊರಟೆ ತೆಗೆದು ಮಾವಿನ ಪಲ್ಪ್‌ ಅನ್ನ ತೆಗೆದು ಮಿಕ್ಸರ್‌ ಜಾರ್’ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತೊಗರಿಬೇಳೆಯನ್ನು ನುಣ್ಣಗೆ ಬೇಯಿಸಿಕೊಳ್ಳಿ.

ಈಗ ಪ್ಯಾನ್‌ವೊಂದಕ್ಕೆ ತುಪ್ಪ ಹಾಕಿ ಬಿಸಿಯಾದ ಮೇಲೆ ಸಾಸಿವೆ ಹಾಗೂ ಜೀರಿಗೆ ಹಾಕಿ ಸಿಡಿಸಿ. ಅದಕ್ಕೆ ಇಂಗು, ಕರಿಬೇವು, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಕೈಯಾಡಿಸಿ.

ಅದಕ್ಕೆ ಮಾವಿನಕಾಯಿ ತಿರುಳು, ಟೊಮೆಟೊ, ನಿಂಬೆರಸ, ಕಾಳುಮೆಣಸಿನಪುಡಿ, ಅರಿಸಿನ ಪುಡಿ, ಜೀರಿಗೆ ಪುಡಿ, ಬೆಲ್ಲ, ಬೇಯಿಸಿದ ತೊಗರಿಬೇಳೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.

ನಂತರ ಅಗತ್ಯವಿದ್ದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹೆಚ್ಚಿದ ಕೊತ್ತಂಬರಿ ಸೊಪ್ಪು ಉದುರಿಸಿ. ಇದೀಗ ರುಚಿಕರವಾದ ಮಾವಿನಕಾಯಿ ರಸಂ ಸವಿಯಲು ಸಿದ್ಧ.

ಹೆಚ್ಚಿನ ಸುದ್ದಿ