Sunday, July 7, 2024
Homeಟಾಪ್ ನ್ಯೂಸ್Bharath Rice : 5 ತಿಂಗಳಿಗೆ ಭಾರತ್ ರೈಸ್‌ ಯೋಜನೆಗೆ ಟಾಟಾ ಹೇಳಿದ ಸರ್ಕಾರ!

Bharath Rice : 5 ತಿಂಗಳಿಗೆ ಭಾರತ್ ರೈಸ್‌ ಯೋಜನೆಗೆ ಟಾಟಾ ಹೇಳಿದ ಸರ್ಕಾರ!

ಬೆಂಗಳೂರು: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಭಾರತ್ ಅಕ್ಕಿ’ ಜುಲೈನಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಯೋಜನೆ ಮೂಲಕ 29 ರೂ.ಗೆ ಅಕ್ಕಿ, 27.30 ರೂ.ಗೆ ಗೋಧಿಹಿಟ್ಟು ಹಾಗೂ 60 ರೂ.ಗೆ ಕಡ್ಡಬೇಳೆ ವಿತರಣೆ ಮಾಡಲಾಗುತ್ತಿತ್ತು.

ಕೇಂದ್ರ ಸರ್ಕಾರ 2024ರ ಫೆ. 2ರಂದು ಭಾರತ್ ಅಕ್ಕಿ ವಿತರಣೆ ಆರಂಭಿಸಿತ್ತು.ರಾಜ್ಯದೆಲ್ಲೆಡೆ ಮೊಬೈಲ್ ವ್ಯಾನ್‌ಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು. ಜತೆಗೆ ರಿಲಾಯನ್ಸ್, ಜಿಯೋ ಮಾರ್ಟ್ ಸೇರಿ ಹಲವು ಮಾಲ್ ಗಳಲ್ಲಿ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು.ಹೀಗಾಗಿ ಭಾರತ್ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿತ್ತು.

ಕಳೆದ ವರ್ಷ ಮಳೆಯ ಕೊರತೆಯಿಂದ ಭತ್ತದ ಉತ್ಪಾದನೆ ಕುಂಠಿತಗೊಂಡಿತ್ತು. ಹೀಗಿರುವಾಗ 29 ರೂ.ಗೆ ಭಾರತ್ ಅತ್ತಿ ವಿತರಿಸುವುದು ಸರಕಾರಕ್ಕೆ ಭಾರಿ ಹೊರೆ ಯಾಗುತ್ತದೆ ಎನ್ನಲಾಗಿದ್ದು, ಇದರಿಂದಲೇ ಭಾರತ್‌ ಅಕ್ಕಿ ವಿತರಣೆಗೆ ಬ್ರೇಕ್‌ ಹಾಕಲಾಗಿದೆ

ಹೆಚ್ಚಿನ ಸುದ್ದಿ