Sunday, July 7, 2024
Homeಟಾಪ್ ನ್ಯೂಸ್VIRAL NEWS : ಅಪ್ಪ - ಅಜ್ಜಿಯ ಸಮಾಧಿ ತೊಳೆದ ರಕ್ಷಕ್ ಬುಲೆಟ್ - VIDEO

VIRAL NEWS : ಅಪ್ಪ – ಅಜ್ಜಿಯ ಸಮಾಧಿ ತೊಳೆದ ರಕ್ಷಕ್ ಬುಲೆಟ್ – VIDEO

ಬೆಂಗಳೂರು : ಸದಾ ಒಂದಲ್ಲ ಒಂದು ಚರ್ಚೆಯಲ್ಲಿರುವ ಯುವ ನಟ ರಕ್ಷಕ ಬುಲೆಟ್ ಇದೀಗ ತಂದೆ ಹಾಗೂ ಅಜ್ಜಿಯ ಸಮಾಧಿ ತೊಳೆಯುವ ಮೂಲಕ ಮತ್ತೆ ವೈರಲ್ ಆಗಿದ್ದು, ವಿಡಿಯೋಗೆ ಮೆಚ್ಚುಗೆ ವ್ಯಕ್ತವಾಗಿದೆ.

ಗೌರಮ್ಮ ಹಾಗೂ ಬುಲೆಟ್ ಪ್ರಕಾಶ್ ಸಮಾಧಿ ಅಕ್ಕ ಪಕ್ಕದಲ್ಲೇ ಇದೆ. ಈ ಸಮಾಧಿಗೆ ರಕ್ಷಕ್ ಬುಲೆಟ್ ಭೇಟಿ ನೀಡಿದ್ದಾರೆ. ನನಗೆ ಎಷ್ಟೇ ಖುಷಿ ಆಗಲಿ, ಬೇಸರ ಆಗಲಿ ನಾನು ಇಲ್ಲಿಗೆ ಬಂದು ಐದು ನಿಮಿಷ ಕುಳಿತು ನನ್ನ ಮನಸ್ಸಿನ ಮಾತನ್ನು ಹೇಳಿದಾಗ ತುಂಬಾ ಖುಷಿ ಎನಿಸುತ್ತದೆ ಎಂದರು. 

ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ. ಈ ಕೆಲಸ ನನಗೆ ಬಹಳ ಖುಷಿ  ನೀಡುತ್ತದೆ, ಸದಾ ಅಪ್ಪ ನನ್ನೊಂದಿಗೆ ಇದ್ದಾರೆ ಎಂಬ ಭಾವನೆ ಬರುತ್ತದೆ ಎಂದು ರಕ್ಷಕ್ ಬುಲೆಟ್ ಹೇಳಿದರು. 

 

View this post on Instagram

 

A post shared by rakshak sena (@rakshak_bullet)

ರಕ್ಷಕ್ ಮೂರೇ ವರ್ಷದಲ್ಲಿ ಹೇಗೆ ಬೆಳೆದ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ ಒಂದು ಶ್ರಮ ಇದೆ. ನಮ್ಮ ಅಜ್ಜಿ, ತಂದೆನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. 

ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ ಎಂದು ರಕ್ಷಕ್ ಹೇಳಿದ್ದಾರೆ.

ರಕ್ಷಕ್ ಅವರು ಯಾವುದೇ ವಿಡಿಯೋವನ್ನು ಹಂಚಿಕೊಂಡರೆ ನೆಗಟಿವ್ ಕಮೆಂಟ್ಸ್ ಬರೋದೆ ಹೆಚ್ಚು. ಆದರೆ ಈ ವಿಡಿಯೋದಲ್ಲಿ ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದ್ದು ಎಲ್ಲರೂ ಪಾಸಿಟಿವ್ ರಿಯಾಕ್ಷನ್ ಕೊಟ್ಟಿದ್ದಾರೆ

ಹೆಚ್ಚಿನ ಸುದ್ದಿ