Sunday, July 7, 2024
Homeಟಾಪ್ ನ್ಯೂಸ್Rajyotsava award for Rowdy sheeter : ರೌಡಿಶೀಟರ್‌ಗೆ ರಾಜ್ಯೋತ್ಸವ ಪ್ರಶಸ್ತಿ – ವಿವಾದದ ಬಳಿಕ...

Rajyotsava award for Rowdy sheeter : ರೌಡಿಶೀಟರ್‌ಗೆ ರಾಜ್ಯೋತ್ಸವ ಪ್ರಶಸ್ತಿ – ವಿವಾದದ ಬಳಿಕ ಎಚ್ಚೆತ್ತ ಸರ್ಕಾರ

ಬೆಂಗಳೂರು : ರೌಡಿ ಶೀಟರ್‌ ಗೆ ರಾಜ್ಯೋತ್ಸವ ಪ್ರಶಸ್ತಿ (Rajyotsava award) ನೀಡಿ ಗೌರವಿಸಿದ್ದ ಮೈಸೂರು ಜಿಲ್ಲಾಡಳಿತ (Mysore district administration) ವಿವಾದ ಭುಗಿಲೇಳುತ್ತಿದ್ದಂತೆಯೇ ಎಚ್ಚೆತ್ತುಕೊಂಡಿದೆ. ರೌಡಿ ಶೀಟರ್‌ ಅಶೋಕ್‌ ಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್‌ ಪಡೆಯುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ (Kannada and culture department) ಸಹಾಯಕ ನಿರ್ದೇಶಕ ಸುದರ್ಶನ್‌ ತಿಳಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಕಡೆಯ ಕ್ಷಣದಲ್ಲಿ ಎಂಕೆ ಅಶೋಕ್‌ ಹೆಸರು ಸೇರಿಸಲಾಗಿತ್ತು. ಮ. 1 ರಂದು ನಡೆದ ಭರ್ಜರಿ ಸಮಾರಂಭದಲ್ಲಿ ಖುದ್ದು ಸಚಿವ ಎಚ್‌.ಸಿ ಮಹದೇವಪ್ಪ ಅವರೇ ರೌಡಿಶೀಟರ್‌ ಗೆ ಪ್ರಶ್ತಿ ಪ್ರದಾನ ಮಾಡಿದ್ದರು. ಬಳಿಕ ಆತ ಮಾತ್ರವಲ್ಲದೇ ಅವನ ಮಗನೂ ಸಹ ರೌಡಿಶೀಟರ್‌ ಎಂದು ತಿಳಿದುಬಂದಿತ್ತು. ರೌಡಿ ಕುಟುಂಬದ ಯಾವ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ತೂರಿಬಂದಿತ್ತು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ಬಿಜೆಪಿ ನಾಯಕ ಯತ್ನಾಳ್‌, ಕೊತ್ವಾಲನ ಶಿಷ್ಯರು ಅಧಿಕಾರದಲ್ಲಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆಯೇ ನಿದರ್ಶನ ಎಂದು ಟೀಕಿಸಿದ್ದರು.

ಹೆಚ್ಚಿನ ಸುದ್ದಿ