Sunday, July 7, 2024
Homeಚುನಾವಣೆ 2023Rajasthan cm : ರಾಜಸ್ಥಾನ ಸಿಎಂ ಪ್ರಮಾಣ ವಚನ

Rajasthan cm : ರಾಜಸ್ಥಾನ ಸಿಎಂ ಪ್ರಮಾಣ ವಚನ

ಜೈಪುರ : ರಾಜಸ್ಥಾನದ (Rajasthan) ಮುಖ್ಯಮಂತ್ರಿಯಾಗಿ ಭಜನ್‌ ಲಾಲ್‌ ಶರ್ಮಾ (Bhajan lal sharma) ಶುಕ್ರವಾರ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿ (PM Narendra modi) , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (J P Nadda)ಸೇರಿದಂತೆ ಹಲವು ಪ್ರಮುಖರು ಹಾಜರಿದ್ದ ಸಭೆಯಲ್ಲಿ ಭಜನ್‌ ಲಾಲ್‌ ಶರ್ಮಾ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2009 -2014 ರವರೆಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಭಜನ್ ಲಾಲ್‌, 2014-2016 ರವರೆಗೆ ಬಿಜೆಪಿ ಪ್ರದೇಶ್ ಉಪಾಧ್ಯಕ್ಷರಾಗಿ ಪಕ್ಷಕ್ಕೆ ಸೇವೆ ಸಲ್ಲಿಸಿದ್ದರು. 2016 ರಿಂದ ಇಲ್ಲಿಯವರೆಗೆ ಬಿಜೆಪಿ ಪ್ರದೇಶ ಮಹಾಮಂತ್ರಿಯಾಗಿ ಕೆಲಸ ಮಾಡಿದ್ದರು.

ಎಬಿವಿಪಿಯಿಂದ ರಾಜಕೀಯಕ್ಕೆ ಧುಮುಕಿದ್ದ ಭಜನ್‌ ಲಾಲ್‌, 1992 ರಲ್ಲಿ ಅಯೋಧ್ಯಾ ಪ್ರಕರಣದಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು.

ಹೆಚ್ಚಿನ ಸುದ್ದಿ