Thursday, July 4, 2024
Homeಟಾಪ್ ನ್ಯೂಸ್Rahul Gandhi: ಕಡತದಿಂದ ಭಾಷಣಕ್ಕೆ ಕೊಕ್ - ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

Rahul Gandhi: ಕಡತದಿಂದ ಭಾಷಣಕ್ಕೆ ಕೊಕ್ – ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ

ನವದೆಹಲಿ: ಸೋಮವಾರ ಸಂಸತ್ತಿನಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿರುಸಿನ ಭಾಷಣ ಮಾಡಿದ್ದರು. ಕಾಂಗ್ರೆಸ್‌ ಸಂಸದನ ಭಾಷಣ ಹಲವು ಟೀಕೆಗಳಿಗೆ ಕಾರಣವಾಗಿದ್ದು, ಅವರ ಭಾಷಣದ ಕೆಲವು ಭಾಗಗಳನ್ನು ಲೋಕಸಭೆಯ ದಾಖಲೆಯಿಂದ ತೆಗೆದುಹಾಕಲಾಗಿದೆ. ಈ ಕ್ರಮವನ್ನು ಪ್ರಶ್ನಿಸಿ ರಾಹುಲ್‌ ಗಾಂಧಿ ಇಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ರಾಹುಲ್‌ ಗಾಂಧಿ, ಕೆಲವು ಟೀಕೆಗಳನ್ನು ಹೊರಹಾಕುವ ಸಲುವಾಗಿ ಭಾಷಣದ ಕೆಲ ಪದಗಳನ್ನು ಹೊರಹಾಕಲು ಸ್ಪೀಕರ್‌ ಅವರಿಗೆ ಹಕ್ಕಿದ್ದು, ವಿವಾದಿತ ಪದಗಳನ್ನಷ್ಟೇ ಹೊರಹಾಕಬೇಕು. ಆದರೆ ನನ್ನ ಭಾಷಣದ ಮುಖ್ಯ ಭಾಗಗಳನ್ನೇ ದಾಖಲೆಯಿಂದ ತೆಗೆದುಹಾಕಿರುವ ಕ್ರಮವನ್ನು ತಿಳಿದು ನಾನು ಆಘಾತಕ್ಕೊಳಗಾಗಿದ್ದೇನೆ. ಜುಲೈ 2 ರ ಲೋಕಸಭೆಯ ತಿದ್ದುಪಡಿಯಾಗದ ಚರ್ಚೆಗಳ ಸಂಬಂಧಿತ ಭಾಗಗಳನ್ನು ನಾನು ಲಗತ್ತಿಸುತ್ತಿದ್ದೇನೆ. ತೆಗೆದುಹಾಕಲಾದ ಭಾಗಗಳು ನಿಯಮ 380 ರ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಲು ಕಾಂಗ್ರೆಸ್ ನಾಯಕ ಬಿರ್ಲಾಗೆ ತಿಳಿಸಿದರು.

ನಾನು ಸದನದಲ್ಲಿ ಹೇಳಲು ಬಯಸಿದ್ದು ನೆಲದ ವಾಸ್ತವತೆ ಹಾಗೂ ವಾಸ್ತವಿಕ ನಿಲುವು. ಜನರ ಸಾಮೂಹಿಕ ಧ್ವನಿಯನ್ನು ವ್ಯಕ್ತಪಡಿಸುವುದು ಸದನದ ಪ್ರತಿಯೊಬ್ಬ ಸದಸ್ಯನ ವಾಕ್ ಸ್ವಾತಂತ್ರ್ಯ. ಜನರ ಸಮಸ್ಯೆಗಳನ್ನು ಪ್ರತಿಪಾದಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಹಕ್ಕು. ಆ ಹಕ್ಕನ್ನು ನಾನು ನಿನ್ನೆ ಚಲಾಯಿಸಿದ್ದೇನೆ ಎಂದಿದ್ದಾರೆ.

ನನ್ನ ಹೇಳಿಕೆಗಳನ್ನು ತೆಗೆದುಹಾಕುವುದು ಸಂಸದೀಯ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದೆ. ಈ ಸಂದರ್ಭದಲ್ಲಿ ನಾನು ಅನುರಾಗ್ ಠಾಕೂರ್ ಅವರ ಭಾಷಣದ ಬಗ್ಗೆ ಉಲ್ಲೇಖ ಮಾಡಲು ಬಯಸುತ್ತೇನೆ. ಅನುರಾಗ್ ಅವರ ಭಾಷಣ ಕೇವಲ ಆರೋಪಗಳಿಂದ ತುಂಬಿತ್ತು ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿ