Sunday, July 7, 2024
Homeಟಾಪ್ ನ್ಯೂಸ್Rahul Gandhi: ಜನರನ್ನು ತಲುಪಲು ಇಮೇಲ್‌ ಐಡಿ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ

Rahul Gandhi: ಜನರನ್ನು ತಲುಪಲು ಇಮೇಲ್‌ ಐಡಿ ಬಿಡುಗಡೆ ಮಾಡಿದ ರಾಹುಲ್‌ ಗಾಂಧಿ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ (LoP) ರಾಹುಲ್ ಗಾಂಧಿ ಲೋಕಸಭೆಯಲ್ಲಿ ಮಾಡಿದ ಭಾಷಣದ ಸುತ್ತಲು ವಿವಾದ ಎದ್ದಿದ್ದು, ಈ ನಡುವೆ ಅವರು ಮಂಗಳವಾರ ಜನರೊಂದಿಗೆ ಸಂಪರ್ಕ ಸಾಧಿಸಲು ಇಮೇಲ್ ಐಡಿಯನ್ನು ಬಿಡುಗಡೆ ಮಾಡಿದ್ದಾರೆ.

ಸೋಮವಾರ ಲೋಕಸಭೆಯಲ್ಲಿ ಅಬ್ಬರದ ಭಾಷಣ ಮಾಡಿದ ಬಳಿಕ ದಾಖಲೆಯಿಂದ ಅವರ ಭಾಷಣದ ಹಲವು ಭಾಗಗಳನ್ನು ತೆಗೆದುಹಾಕಲಾಗಿದೆ. ತೆಗೆದುಹಾಕಲಾದ ಭಾಗಗಳಲ್ಲಿ ಹಿಂದೂಗಳು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುರಿತು‌ ಹಲವು ಟೀಕೆಗಳು ಸೇರಿವೆ.

ಈ ನಡುವೆ ಇಮೇಲ್‌ ಐಡಿ ಬಿಡುಗೆ ಮಾಡಿದ ಅವರು, ಅಡೆತಡೆಯಿಲ್ಲದ, ಶೋಧಿಸದ, ನಿರ್ಭೀತ, ಮುಕ್ತ ಮತ್ತು ನ್ಯಾಯಯುತ ಸಂಭಾಷಣೆ ನಮ್ಮ ಪ್ರಜಾಪ್ರಭುತ್ವದ ಶಕ್ತಿಯಾಗಿದೆ. ನಾನು ನಿಮ್ಮೊಂದಿಗೆ ಮಾತನಾಡಲು, ನಿಮ್ಮ ಮಾತನ್ನು ಆಲಿಸಲು ಮತ್ತು ಭಾರತದ ಕಲ್ಪನೆಯ ನಿಜವಾದ ಅಭಿವ್ಯಕ್ತಿಯನ್ನು ಸುಲಭಗೊಳಿಸಲು ಬಂದಿದ್ದೇನೆ. ಮಾಧ್ಯಮ ಸಂದರ್ಶನಗಳು, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು, ಆಫ್ ದಿ ರೆಕಾರ್ಡ್ ಮೀಟಿಂಗ್‌ಗಳು ಸೇರಿದಂತೆ ಎಲ್ಲಾ ಸಂವಹನ ಸಂಬಂಧಿತ ವಿಚಾರಣೆಗಳಿಗೆ ದಯವಿಟ್ಟು ನನಗೆ communications@rahulgandhi.in ನಲ್ಲಿ ಇಮೇಲ್ ಮಾಡಿ ಎಂದು ರಾಹುಲ್‌ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

ಹೆಚ್ಚಿನ ಸುದ್ದಿ