Sunday, July 7, 2024
Homeಟಾಪ್ ನ್ಯೂಸ್VIRAL NEWS: ಬೆಕ್ಕಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ : VIDEO

VIRAL NEWS: ಬೆಕ್ಕಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಸಮಾರಂಭ : VIDEO

ಮುಂಬೈ: ಬೆಕ್ಕಿಗೆ (Cat) ಹೆಸರಿಡಲು ಪುಣೆ (Pune) ಮೂಲದ ಬ್ಯೂಟಿ ಬ್ರ್ಯಾಂಡ್‌ ಕಂಪನಿಯೊಂದು ನಾಮಕರಣ ಸಮಾರಂಭವನ್ನು ಆಯೋಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ.

ಪುಣೆ ಮೂಲದ ಬ್ಯೂಟಿ ಬ್ರ್ಯಾಂಡ್ ನರಿಯಾಲ್ ಕಾಸ್ಮೆಟಿಕ್ಸ್ ಎಂಬ ಕಂಪನಿಯ ಉದ್ಯೋಗಿಗಳು ಬೆಕ್ಕಿಗೆ ನಾಮಕರಣ ಶಾಸ್ತ್ರ ಮಾಡಿ ಕೊಕಾಯಾ ಎಂದು ಹೆಸರಿಟ್ಟಿದೆ. ಜೊತೆಗೆ ಬೆಕ್ಕಿನ ಮರಿಗೆ ಆರತಿಯನ್ನು ಮಾಡಿ, ಅದರ ಹಣೆಯ ಮೇಲೆ ತಿಲಕವನ್ನೂ ಹಚ್ಚಿ ಕಂಪನಿಯ ಒಳಗೆ ಕರೆದುಕೊಂಡಿದ್ದಾರೆ. ಅದಾದ ಬಳಿಕ ಬೆಕ್ಕನ್ನು ತೊಟ್ಟಿನಲ್ಲಿ ತೂಗಿ ಸಾಂಪ್ರದಾಯಿಕವಾಗಿ ನಾಮಕರಣ ಶಾಸ್ತ್ರ ಮುಗಿಸಿದ್ದಾರೆ.

ನಾಮಕರಣದ ನಂತರ, ಕೇಕ್ ಕತ್ತರಿಸುವ ಕಾರ್ಯಕ್ರಮದೊಂದಿಗೆ ಸಂಭ್ರಮಾಚರಣೆ ಮುಂದುವರೆಯಿತು. ಉದ್ಯೋಗಿಯೊಬ್ಬರು ಕಿಟನ್‌ಗೆ ಚಾಕೊಲೇಟ್ ಕೇಕ್ ಅನ್ನು ಕಟ್ ಮಾಡಲು ಸಹಾಯ ಮಾಡಿದರು. ಎಲ್ಲವೂ ತನಗೆ ಸೇರಿದ್ದು ಎಂಬಂತೆ ಬೆಕ್ಕಿನ ಮರಿ ಕಚೇರಿಯಲ್ಲಿ ಓಡಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಹೆಚ್ಚಿನ ಸುದ್ದಿ