Sunday, July 7, 2024
Homeಟಾಪ್ ನ್ಯೂಸ್RAJ NEWS: ಸ್ಟಿಂಗ್ ಆಪರೇಷನ್ ನೆಪದಲ್ಲಿ ಸುಲಿಗೆ : ಖಾಸಗಿ ಚಾನಲ್‌ನ ಸಿಬ್ಬಂದಿ ಅರೆಸ್ಟ್‌

RAJ NEWS: ಸ್ಟಿಂಗ್ ಆಪರೇಷನ್ ನೆಪದಲ್ಲಿ ಸುಲಿಗೆ : ಖಾಸಗಿ ಚಾನಲ್‌ನ ಸಿಬ್ಬಂದಿ ಅರೆಸ್ಟ್‌

ಬೆಂಗಳೂರು: ಮಸಾಜ್ ಪಾರ್ಲರ್ (Massage Parlour) ಸ್ಟಿಂಗ್ ಆಪರೇಷನ್ (Sting Operation) ನೆಪದಲ್ಲಿ ಸುಲಿಗೆ ಮಾಡಿದ ಆರೋಪದಡಿಯಲ್ಲಿ ಖಾಸಗಿ ಸುದ್ದಿ ವಾಹಿನಿ ರಾಜ್‌ನ್ಯೂಸ್‌ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ರಾಜಾನುಕುಂಟೆ ವೆಂಕಟೇಶ್ ಬಂಧಿತ ವ್ಯಕ್ತಿ. ಈತ ರಾಜ್‌ ನ್ಯೂಸ್‌ (Raj News) ಚಾನಲ್‌ನಲ್ಲಿ ಸಿಇಓ ಆಗಿ ಕೆಲಸ ಮಾಡುತ್ತಿದ್ದರು. ಇಂದಿರಾನಗರದ ಟ್ರೀ ಸ್ಪಾ ಬ್ಯೂಟಿ ಆಂಡ್ ಮಸಾಜ್ ಪಾರ್ಲರ್ ಮೇಲೆ ಸ್ಟಿಂಗ್ ಆಪರೇಷನ್‌ ಮಾಡಿದ್ದರು. ಪಾರ್ಲರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಸುತ್ತೀದೀರಿ ಎಂದು ಆರೋಪಿಸಿ ಸ್ಟಿಂಗ್ ಮಾಡಿದ ವೀಡಿಯೋಗಳನ್ನು ಮುಂದಿಟ್ಟುಕೊಂಡು ಮಾಲೀಕರಿಗೆ ವೆಂಕಟೇಶ್‌ ಬೆದರಿಕೆ ಹಾಕಿದ್ದರು ಹಾಗೂ 15 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.

ವೆಂಕಟೇಶ್‌ ಕೊನೆಗೆ 8 ಲಕ್ಷ ರೂ. ನೀಡುವಂತೆ ಸ್ಪಾ ಮ್ಯಾನೇಜರ್‌ ಶಿವಶಂಕರ್‌ಗೆ ದುಂಬಾಲು ಬಿದ್ದು ಹಣ ಕೊಡಲೇಬೇಕು ಎಂದು ತಾಕೀತು ಮಾಡಿದ್ದ. ಇಲ್ಲವಾದಲ್ಲಿ ಪಾರ್ಲರ್‌ ವಿರುದ್ಧ ಚಾನಲ್‌ನಲ್ಲಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಸ್ಪಾ ಮ್ಯಾನೇಜರ್ ಶಿವಶಂಕರ್‌ ಜೀವನ್ ಭೀಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿ‌ನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೆಂಕಟೇಶ್‌ನನ್ನು ಬಂಧಿಸಿದ್ದಾರೆ.

ಹೆಚ್ಚಿನ ಸುದ್ದಿ