Sunday, July 7, 2024
Homeಕ್ರೀಡೆTEAM INDIA : ಭಾರತಕ್ಕೆ ಬಂದಿಳಿಯಲಿದೆ ಟೀಂ ಇಂಡಿಯಾ : ಸ್ವಾಗತಕ್ಕೆ ಭರ್ಜರಿ ತಯಾರಿ

TEAM INDIA : ಭಾರತಕ್ಕೆ ಬಂದಿಳಿಯಲಿದೆ ಟೀಂ ಇಂಡಿಯಾ : ಸ್ವಾಗತಕ್ಕೆ ಭರ್ಜರಿ ತಯಾರಿ

ವೆಸ್ಟ್​ ಇಂಡೀಸ್​ನ ಬಾರ್ಬಡೋಸ್‌ನಲ್ಲಿ ಜರುಗಿದ ಟಿ20 ವಿಶ್ವಕಪ್ 2024 ಫೈನಲ್ ಪಂದ್ಯದಲ್ಲಿ ಭರ್ಜರಿ ಜಯಗಳಿಸುವ ಟೀಮ್ ಇಂಡಿಯಾ ನಾಳೆ ತವರಿಗೆ ಮರಳಲಿದ್ದು, ಅದ್ಧೂರಿ ಮೆರವಣಿಗೆಗೂ ಮುನ್ನ ಪಿಎಂ ಮೋದಿಯನ್ನು ಭೇಟಿಯಾಗಲಿದ್ದಾರೆ. 

ಜೂನ್ 29ರಂದು ನಡೆದ ಫೈನಲ್ ನಂತರ ಚಂಡಮಾರುತದಿಂದ 3 ದಿನಗಳ ಕಾಲ ಬಾರ್ಬಡೋಸ್‌ನಲ್ಲೇ ಸಿಲುಕಿರುವ ಭಾರತೀಯ ಕ್ರಿಕೆಟ್ ತಂಡ  ಇಂದು ತವರಿಗೆ ಹೊರಟಿದ್ದು, ನಾಳೆ ಬೆಳಗ್ಗೆ ಆಟಗಾರರು ದೆಹಲಿಗೆ ಬಂದಿಳಿಯುವ ಸಾಧ್ಯತೆ ಇದೆ.

ಆಟಗಾರರು, ಅವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು, ಕೋಚಿಂಗ್ ಸಿಬ್ಬಂದಿಯು ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಭಾರತಕ್ಕೆ ಬರಲಿದ್ದಾರೆ. ಭಾರತಕ್ಕೆ ಬಂದ ಬೆನ್ನಲ್ಲೇ ಭಾರತೀಯ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ.

 ಸುಮಾರು 11 ಗಂಟೆಗೆ ಪ್ರಧಾನಿ ಮೋದಿಯೊಂದಿಗೆ ಕೆಲ ಕಾಲ ಮಾತನಾಡಲಿದ್ದು, ಅದಾದ ನಂತರ 2007ರ ಟಿ20 ವಿಶ್ವಕಪ್‌ನಂತೆ ಮುಂಬೈನಲ್ಲಿ ಟೀಮ್ ಇಂಡಿಯಾವನ್ನು ತೆರೆದ ಬಸ್‌ನಲ್ಲಿ ಮೆರವಣಿಗೆ ಮಾಡಲಾಗುತ್ತದೆ ಎಂದು ವರದಿಯಾಗಿದೆ. 

ಹೆಚ್ಚಿನ ಸುದ್ದಿ