Sunday, July 7, 2024
Homeಟಾಪ್ ನ್ಯೂಸ್DENGUE CASE : ರಾಜ್ಯದೆಲ್ಲೆಡೆ ಡೆಂಘಿ ಜ್ವರ ಪತ್ತೆ ಪರೀಕ್ಷೆಗೆ ದರ ನಿಗದಿ 

DENGUE CASE : ರಾಜ್ಯದೆಲ್ಲೆಡೆ ಡೆಂಘಿ ಜ್ವರ ಪತ್ತೆ ಪರೀಕ್ಷೆಗೆ ದರ ನಿಗದಿ 

ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ  ಆರೋಗ್ಯ ಇಲಾಖೆ ಡೆಂಘಿ ಪ್ರಕರಣಗಳ ಟೆಸ್ಟಿಂಗ್ ಗೆ ಖಾಸಗಿ ಆಸ್ಪತ್ರೆಗಳಿಗೂ ದರ ನಿಗದಿ ಮಾಡಿದೆ.

ಇಂದು ಮುಂಜಾನೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಆರೋಗ್ಯ ಇಲಾಖೆಯ ಸಭೆಯಲ್ಲಿ ದರ ನಿಗದಿ ಬಗ್ಗೆ ನಿರ್ಣಯ ಮಾಡಲಾಗಿದ್ದು, ಸುಮಾರು 300 ರಿಂದ 350ಕ್ಕೆ ಏರಿಕೆ ಮಾಡಲಾಗಿದೆ. 

IGM ಹಾಗೂ NS1  ಪರೀಕ್ಷೆಗೆ ಈ ಹಿಂದೆ 250 ರೂಪಾಯಿ ಇತ್ತು. ಆದರೆ ಇದೀಗ 100 ರಿಂದ 150 ರೂಪಾಯಿ ಏರಿಕೆ ಮಾಡಿ ಪರಿಷ್ಕರಣೆ ಸರ್ಕಾರಕ್ಕೆ ಆರೋಗ್ಯ ಇಲಾಖೆಯ ಪ್ರಸ್ತಾವನೆ ಮಾಡಲಾಗಿದೆ. 

ಇನ್ನು ಈ ಬಗ್ಗೆ ಸಂಜೆ ಸಂಜೆ ಪರಿಷ್ಕೃತ ಸುತ್ತೋಲೆಯನ್ನು ಆರೋಗ್ಯ ಇಲಾಖೆ ಹೊರಡಿಸಲಿದೆ. ರಾಜ್ಯದೆಲ್ಲೆಡೆ ಒಂದೇ ದರ ಇರಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಣಯ ಮಾಡಲಾಗಿದೆ ಎನ್ನಲಾಗಿದೆ. 

ಹೆಚ್ಚಿನ ಸುದ್ದಿ