Sunday, July 7, 2024
Homeಟಾಪ್ ನ್ಯೂಸ್Ambani : ಸಾಮೂಹಿಕ ವಿವಾಹ ಆಯೋಜಿಸಿದ ಅಂಬಾನಿ - 50 ಜೋಡಿಗಳಿಗೆ ಶಾದಿ ಭಾಗ್ಯ!

Ambani : ಸಾಮೂಹಿಕ ವಿವಾಹ ಆಯೋಜಿಸಿದ ಅಂಬಾನಿ – 50 ಜೋಡಿಗಳಿಗೆ ಶಾದಿ ಭಾಗ್ಯ!

ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಂಭ್ರಮಕ್ಕಾಗಿ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಪತ್ನಿ, ನೀತಾ ಅಂಬಾನಿ   ಆರ್ಥಿಕವಾಗಿ ಹಿಂದುಳಿದ ಐವತ್ತು ಜೋಡಿಗಳ ಸಾಮೂಹಿಕ ವಿವಾಹ ನಡೆಸಿದ್ದಾರೆ.ಇಲ್ಲಿಗೆ ಖುದ್ದು ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಭೇಟಿ ನೀಡಿ ನವದಂಪತಿಗಳನ್ನು ಆಶೀರ್ವಾದಿಸಿದ್ದಾರೆ. ನವಿ ಮುಂಬೈನಲ್ಲಿ ಈ ವಿವಾವ ಸಮಾರಂಭ ನಡೆದಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈ ವರ್ಷದ ಆರಂಭದಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ತಮ್ಮ ಮೊದಲ ವಿವಾಹಪೂರ್ವ ಆಚರಣೆಯನ್ನು ನಡೆಸಿದರು. ಬಿಲ್ ಗೇಟ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಅವರಂತಹ ಉದ್ಯಮಿಗಳಂತೆ ಭಾರತ ಮತ್ತು ಪ್ರಪಂಚದಾದ್ಯಂತದ ಗಣ್ಯರು ಭಾಗವಹಿಸಿದ್ದರು.
ಎರಡನೇ ಪೂರ್ವ ವಿವಾಹದ ಆಚರಣೆಯನ್ನು ಸಂಬಂಧಿಸಿದಂತೆ, ಅಂಬಾನಿಗಳು ನಾಲ್ಕು ದಿನಗಳ ಕಾಲ ಮೆಡಿಟರೇನಿಯನ್ ಸಮುದ್ರಯಾನವನ್ನು ಆಯೋಜಿಸಿದ್ದರು.

ಅಂತಿಮವಾಗಿ ಜುಲೈ 12 ರಂದು ಮುಂಬೈನ ಪ್ರತಿಷ್ಠಿತ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅಂಬಾನಿ ಪುತ್ರನ ವಿವಾಹ ವಿವಾಹ ನಡೆಯಲಿದೆ.

ಹೆಚ್ಚಿನ ಸುದ್ದಿ