Sunday, July 7, 2024
Homeಕ್ರೈಂHassan sex scandal: ಪ್ರಜ್ವಲ್‌ ರೇವಣ್ಣ ಇರುವ ಜೈಲಿಗೆ ಇಂದು ಸೂರಜ್‌ ರೇವಣ್ಣ ಶಿಫ್ಟ್‌ ...

Hassan sex scandal: ಪ್ರಜ್ವಲ್‌ ರೇವಣ್ಣ ಇರುವ ಜೈಲಿಗೆ ಇಂದು ಸೂರಜ್‌ ರೇವಣ್ಣ ಶಿಫ್ಟ್‌ – ಆಹಾ ಎಂಥಾ ಧನ್ಯಮಿಲನ!

ಒಬ್ಬ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದರೆ, ಮತ್ತೊಬ್ಬ ಸಾವಿರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಪೆನ್ ಡ್ರೈವ್ ಪ್ರಕರಣ ಎದುರಿಸುತ್ತಿದ್ದಾರೆ. ಇಬ್ಬರು ಒಂದೇ ಹೊಟ್ಟೆಯಲ್ಲಿ ಹುಟ್ಟಿ ಒಂದೇ ಮನೆಯಲ್ಲಿ ಇದ್ದ ಅಣ್ತಮ್ಮ ಇದೀಗ ಜೈಲಿ ಗೆ ಸೇರಲಿದ್ದಾರೆ. 

ವಿಧಿ ವಿಪರ್ಯಾಸ ಅಂದರೆ ಇದೇ ಅಲ್ವಾ? ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಒಂದೇ ಸೆಲ್ ನಲ್ಲಿದ್ದಾರೆ. ವಿಶೇಷ ಅಂದರೆ ಪ್ರತ್ಯೇಕ ಕೊಠಡಿ, ಟಿವಿ, ಮೊಬೈಲ್, ಕಾರು.. ಹೀಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಅಣ್ಣ-ತಮ್ಮ ಇದೀಗ ಚಾಪೆ-ದಿಂಬಿನ ಮೊರೆ ಹೋಗಬೇಕಾಗಿದೆ.

ಜನಪ್ರತಿನಿಧಿ ಹೆಸರಿನಲ್ಲಿ ಇವರು ದರ್ಬಾರು ಮಾಡುತ್ತಿದ್ದಾಗ ಕೈಗೊಬ್ಬ- ಕಾಲಿಗೊಬ್ಬ ಆಳುಗಳು, ಸುತ್ತುವರಿದ ಕಾರ್ಯಕರ್ತರ ಜಯಘೋಷಗಳ ನಡುವೆ ಜೀವನ ನಡೆಸುತ್ತಿದ್ದ ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ಸುತ್ತ ಈಗ ಪೊಲೀಸರ ಸರ್ಪಗಾವಲು, ಕೋರ್ಟ್-ಜೈಲು ನಡುವೆ ಪ್ರಯಾಣದ ನಡುವೆ ಪೊಲೀಸರೇ ಕಾವಲು!

ಪ್ರಜ್ವಲ್ ರೇವಣ್ಣ ಪದೇಪದೆ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಸದ್ಯಕ್ಕೆ ಅವರಿಗೆ ಜೈಲೇ ಗತಿ. ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿ ಬುಧವಾರ ಅಂತ್ಯಗೊಂಡಿದ್ದು, ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಈ ಬಾರಿ ನ್ಯಾಯಾಂಗ ಬಂಧನವೊ ಅಥವಾ ಪೊಲೀಸ್ ಕಸ್ಟಡಿ ಮುಂದುವರಿಕೆಯೋ ಎಂಬುದು ಕಾದು ನೋಡಬೇಕಾಗಿದೆ.

ಹೆಚ್ಚಿನ ಸುದ್ದಿ