Sunday, July 7, 2024
Homeಟಾಪ್ ನ್ಯೂಸ್Shocking : ಆಟದ ಗನ್‌ ಕೊಂಡೊಯ್ಯುತ್ತಿದ್ದ ಬಾಲಕನಿಗೆ ಗುಂಡು ಹಾರಿಸಿದ ಪೊಲೀಸ್‌! VIDEO

Shocking : ಆಟದ ಗನ್‌ ಕೊಂಡೊಯ್ಯುತ್ತಿದ್ದ ಬಾಲಕನಿಗೆ ಗುಂಡು ಹಾರಿಸಿದ ಪೊಲೀಸ್‌! VIDEO

ಅಮೆರಿಕ : ಆಟಿಕೆ ಗನ್‌ ಕೊಂಡೊಯ್ಯುತ್ತಿದ್ದ ಬಾಲಕನ ಮೇಲೆ ಪೊಲೀಸ್‌ ಗುಂಡು ಹಾರಿಸಿದ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನ್ಯೂಯಾರ್ಕ್‌ ನಲ್ಲಿ ನಡೆದಿದೆ. ಪೊಲೀಸರು ಬಂಧೂಕು ಧಾರಿ ವ್ಯಕ್ತಿಯೊಬ್ಬ ನಡೆಸುತ್ತಿದ್ದ ದರೋಡೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದ ವೇಳೆ ಈ ಬಾಲಕನ ಬಗ್ಗೆ ಸಂಶಯ ವ್ಯಕ್ತವಾಗಿದ್ದು ಗುಂಡು ಹಾರಿಸಿದ್ದಾಗಿ ತಿಳಿಸಿದ್ದಾರೆ.

ತಮ್ಮ ಬಾಡಿ ವೋರ್ನ್‌ ಕೆಮೆರಾದಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿರುವ ಪೊಲೀಸರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ನಿಮ್ಮ ಬಳಿ ಯಾವುದೇ ಆಯುಧಗಳಿಲ್ಲವೆಂದು ಸಾಬೀತು ಪಡಿಸಲು ಆದೇಶಿಸಿದೆವು .ಆದರೆ ಅವರ ಪೈಕಿ ಒಬ್ಬ ಬಾಲಕ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ. ಹೀಗಾಗಿ ಆತನ ಬಳಿ ಇರುವುದು ನಿಜವಾದ ಗನ್‌ ಇರಬಹುದೆಂಬ ಸಂಶಯ ವ್ಯಕ್ತವಾಯಿತು. ಹೀಗಾಗಿ ನಿಜವಾಗಿಯೂ ಗುಂಡು ಹಾರಿಸಬೇಕಾಯ್ತು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಕೃತ್ಯದ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಹೆಚ್ಚಿನ ಸುದ್ದಿ