Sunday, July 7, 2024
Homeಕ್ರೈಂNew Criminal Laws: ತಪ್ಪಾಗಿ ಸೆಕ್ಷನ್ ಗಳನ್ನ ಹಾಕಬೇಡಿ – ಕೆಳ ಸಿಬ್ಬಂದಿಗಳಿಗೆ ಪೊಲೀಸ್‌ ಆಯುಕ್ತರ...

New Criminal Laws: ತಪ್ಪಾಗಿ ಸೆಕ್ಷನ್ ಗಳನ್ನ ಹಾಕಬೇಡಿ – ಕೆಳ ಸಿಬ್ಬಂದಿಗಳಿಗೆ ಪೊಲೀಸ್‌ ಆಯುಕ್ತರ ಸಲಹೆ

ಯಾವುದೇ ಕಾರಣಕ್ಕೂ ತಪ್ಪಾಗಿ ಸೆಕ್ಷನ್ ಗಳನ್ನ ಹಾಕಬೇಡಿ. ಕೂಲಂಕುಷವಾಗಿ ಪರಿಶೀಲನೆ ನಡೆಸಿದ ಬಳಿಕ ಸೆಕ್ಷನ್ ಗಳನ್ನ ನಮೂದು ಮಾಡಿ ಎಂದು ಪೊಲೀಸ್ ಆಯುಕ್ತರು ಸಿಬ್ಬಂದಿಗಳಿಗೆ ತಿಳಿಸಿದ್ದಾರೆ.

ದೇಶದ ನ್ಯಾಯಾಂಗ ವ್ಯವಸ್ಥೆಯೇ ಜುಲೈ 1 ರಿಂದ ಬದಲಾಗಿದೆ. ಮೂರು ಹೊಸ ಅಪರಾಧ ಕಾನೂನು ಜಾರಿಗೆ ಬಂದಿದೆ. ಇದರಿಂದ ಪೊಲೀಸರು, ನ್ಯಾಯಾಧೀಶರು, ವಕೀಲರು ಹಾಗೂ ನ್ಯಾಯಾಂಗ ಸಿಬ್ಬಂದಿಯ ಕಾರ್ಯ ವೈಖರಿ ಕೂಡಾ ಬದಲಾಗಲಿದೆ.

ಈ ಹೊಸ ಅಪರಾಧ ಕಾನೂಗಳ ಕುರಿತು ಪೊಲೀಸ್‌ ಆಯುಕ್ತರು ಕೆಳ ಹಂತದ ಸಿಬ್ಬಂದಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ. ಯಾವುದೇ ಕಾರಣಕ್ಕೂ ತಪ್ಪಾಗಿ ಸೆಕ್ಷನ್ ಗಳನ್ನ ಹಾಕ ಬಾರದು. ಉದ್ದೇಶಪೂರ್ವಕವಲ್ಲದೇ ಇದ್ದರೂ ತಪ್ಪಾಗಿ ಸೆಕ್ಷನ್ ಹಾಕಿದರೆ ಆರೋಪಿಗೂ ತೊಂದರೆಯಾಗಬಹುದು ಎಂದು ಹೇಳಿದ್ದಾರೆ.

ಹೀಗಾಗಿ ಜನರಿಗೆ ನ್ಯಾಯ ಸಿಗುವ ಉದ್ದೇಶದಿಂದ ತಮ್ಮ ಕೆಳ ಹಂತದ ಸಿಬ್ಬಂಧಿಗಳಿಗೆ ಸೂಚನೆ ನೀಡಿರುವ ಪೊಲೀಸ್ ಆಯುಕ್ತರು

ಸಹಜವಾಗಿ ಹೊಸ ಕಾಯ್ದೆಗಳು ಪೊಲೀಸರಿಗೂ ಕೂಡ ಗೊಂದಲ ಆಗಬಹುದು. ಇದು ತಪ್ಪು ಎಂದಲ್ಲ. ಈ ಹಿನ್ನಲೆ ಪರಿಣಿತರ ಸಲಹೆಯನ್ನು ಪಡೆದ ಬಳಿಕ ಸೆಕ್ಷನ್ ಗಳನ್ನ ನಮೂದಿಸಿ. ನುರಿತ ವಕೀಲರು , ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ ನ್ಯಾಯವಾದಿಗಳ ಬಳಿ ಮಾಹಿತಿ ಕೇಳಿದರೂ ಪರವಾಗಿಲ್ಲ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಇದೂವರೆಗೆ ಬೆಂಗಳೂರಿನಲ್ಲಿ 39 ಪ್ರಕರಣ ಮತ್ತು 80 ಎಫ್‌ ಐಆರ್ ಗಳು ದಾಖಲಾಗಿದೆ.

ಹೆಚ್ಚಿನ ಸುದ್ದಿ