Sunday, July 7, 2024
Homeಟಾಪ್ ನ್ಯೂಸ್MODI V/S RAHUL : ಮೋದಿ ಹೇಳಿದ್ರು "ಚೋಟಾ ಬಚ್ಚಾ" ಕಥೆ : ಯಾರದು ಬಾಲಕ...

MODI V/S RAHUL : ಮೋದಿ ಹೇಳಿದ್ರು “ಚೋಟಾ ಬಚ್ಚಾ” ಕಥೆ : ಯಾರದು ಬಾಲಕ ? – VIDEO

ನವದೆಹಲಿ: ಒಂದು ಮಗು ವೈಫಲ್ಯಗಳ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸದನದಲ್ಲಿ ಕಾಂಗ್ರೆಸ್ (congress) ಪಕ್ಷಕ್ಕೆ ತಿರುಗೇಟು ನೀಡಿದರು.

ಸದನದಲ್ಲಿ ಮಾತನಾಡಿದ ಮೋದಿ, ಒಂದು ಚೋಟಾ ಬಚ್ಚಾ ಕಥೆಯನ್ನು ಹೇಳುತ್ತಾ… ಒಬ್ಬ ಸಣ್ಣ ಬಾಲಕ ತುಂಬಾ ಸಂತೋಷವಾಗಿ‍ದ್ದ ಮತ್ತು ಸಂಪೂರ್ಣವಾಗಿ ಅಹಂಕಾರದಲ್ಲಿ ತೇಲಾಡುತ್ತಿದ್ದ. ನನಗೆ 99 ಅಂಕಗಳು ಬಂದಿವೆ ಎಂದು ಅವನು ಎಲ್ಲರಿಗೂ ಹೇಳುತ್ತಾ ತಿರುಗಾಡುತ್ತಿದ್ದ. 99 ಅಂಕಗಳು ಬಂದ ಬಗ್ಗೆ ಆತನನ್ನು ಜನ ಹಾಡಿ ಹೊಗಳಿ ತುಂಬಾ ಪ್ರೋತ್ಸಾಹಿಸುತ್ತಿದ್ದರು.

ಹೀಗಿದ್ದಾಗ ಆಗ ಒಬ್ಬ ಶಿಕ್ಷಕರು ಬಂದು ಬಾಲಕನ ಸಾನೆ ಏನೆಂದು ಕೇಳಿದರು. ಅಲ್ಲಿದ್ದ ಜನರು ಬಾಲಕ 100ಕ್ಕೆ 99 ಅಂಕ ಪಡೆದಿದ್ದಾನೆ ಎಂದು ಹೇಳುಳಿದಾಗ ಶಿಕ್ಷಕರು ಬಾಲಕ 100 ರಲ್ಲಿ 99 ಅಂಕಗಳನ್ನು ಪಡೆದಿಲ್ಲ. ಬದಲಿಗೆ ಆ ಬಾಲಕ 543 ಕ್ಕೆ 99 ಅಂಕಗಳನ್ನು ಪಡೆದಿದ್ದಾನೆ ಎಂದು ಜನರಿಗೆ ಸತ್ಯ ಹೇಳಿದ್ರು.

ಕಾಂಗ್ರೆಸ್ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಡೆದ ಸೀಟುಗಳ ಬಗ್ಗೆ ಮಾತನಾಡುತ್ತಾ ಮೋದಿ ಕಾಂಗ್ರೆಸ್‌ನವರು ವೈಫಲತೆಯಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದೀರಿ ಎಂದು ಕಿಚಾಯಿಸಿದರು.

ಇದರ ವಿಡಿಯೋ ಎಲ್ಲೆಡೆ ಹರಿದಾಡಲಾರಂಭಿಸುತ್ತಿದ್ದಂತೆ ಮೋದಿ ಹೇಳಿದ ಬಾಲಕ ಇನ್ಯಾರೂ ಅಲ್ಲ ಅದು ರಾಹುಲ್‌ ಗಾಂಧಿ ಎಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಹೆಚ್ಚಿನ ಸುದ್ದಿ